ಸ್ಕ್ವಾಷ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತೀಯ ತಂಡ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025
ರ ಸ್ಕ್ವಾಷ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ತಂಡ ಹಾಂಗ್‌ಕಾಂಗ್ ತಂಡವನ್ನು 3-0 ಅಂತರದಿಂದ ಮಣಿಸಿ, ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿ ಭಾರತದ ಸ್ಕ್ವಾಷ್ ತಂಡಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜ್ಯೋಷ್ನಾ ಚಿನ್ನಪ್ಪ, ವೆಲವನ್ ಸೆಂಥಿಲ್ ಕುಮಾರ್, ಅನಾಹತ್‌ಸಿಂಗ್ ಮತ್ತು ಅಭಯ್‌ಸಿಂಗ್ ಅವರ ಸಮರ್ಪಣಾ ಮನೋಭಾವದ ಆಟಕ್ಕೆ ಜಯ ಲಭಿಸಿದೆ. ಅವರು ಮುಂದಿನ ಪಂದ್ಯಗಳಲ್ಲಿ ಕೂಡ ಅತ್ಯುತ್ತಮ ಸಾಧನೆ ಮಾಡಲಿ ಎಂದು ನಿಖಿಲ್ ಅವರು ಶುಭ ಹಾರೈಸಿದ್ದಾರೆ.

- Advertisement - 

 

 

- Advertisement - 

 

Share This Article
error: Content is protected !!
";