ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ 2019ರಲ್ಲಿ ಸ್ಥಾಪನೆಗೊಂಡು ರಸ್ತೆ ಅಪಘಾತಗಳು ಸಂಭವಿಸಿದಾಗ ರಕ್ಷಣೆಗೆ ದಾವಿಸುವುದು ಹಾಗೂ ತುರ್ತು ಸಂದರ್ಭಗಳಲ್ಲಿ ನೆರವಿಗೆ ದಾವಿಸಿ ಜೀವಗಳ ರಕ್ಷಿಸುವ ಸಂಸ್ಥೆಯಾಗಿದೆ ಎಂದು ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸೌಮ್ಯ ಮಂಜುನಾಥಸ್ವಾಮಿ ತಿಳಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೂಲತಃ ಸಂಸ್ಥೆಯ ಕೇಂದ್ರ ಕಚೇರಿಯು ಚಿತ್ರದುರ್ಗದಲ್ಲಿ ಇದೆ. ಕರ್ನಾಟಕದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ತನ್ನ ಘಟಕ ಹೊಂದಿದ್ದು ರಾಜ್ಯಾದ್ಯಂತ 40,000 ಸಾವಿರ ಸದಸ್ಯರನ್ನು ಹೊಂದಿದೆ. ಸುಮಾರು 2,500 ಹೆಚ್ಚು ಜನರ ಜೀವಗಳನ್ನು ರಸ್ತೆ ಅಪಘಾತಗಳು ಹಾಗೂ ತುರ್ತು ಸಂದರ್ಭಗಳಲ್ಲಿ ರಕ್ಷಣೆ ಮಾಡಿರುವುದು ಈ ಸಂಸ್ಥೆಯ ಸಾಧನೆಯಾಗಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿಯು ತುರ್ತು ಸಂದರ್ಭಗಳಲ್ಲಿ ನೆರವು ಹಾಗೂ ರಸ್ತೆ ಅಪಾಯಗಳನ್ನು ತಡೆಗಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಲ್ಲಿ ಅಂತಹ ವ್ಯಕ್ತಿ ಗುರುತಿಸಿ ಸಂಸ್ಥೆಯು ಜೀವ ರಕ್ಷಕ ಪ್ರಶಸ್ತಿ ಘೋಷಣೆ ನೀಡುತ್ತದೆ. ಸಂಸ್ಥೆಗೂ ಹಾಗೂ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ನೀಡುವುದು ನಮ್ಮ ಸಂಸ್ಥೆ ಹೆಮ್ಮೆ ತರುವ ವಿಷಯವಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಪ್ರಥಮ ಬಾರಿಗೆ ಚಿತ್ರದುರ್ಗದಲ್ಲೇ ನಡೆಯುತ್ತಿದ್ದು, ಜೀವ ರಕ್ಷಕ ಬಳಗಕ್ಕೆ ಸಂತೋಷ ಉಂಟು ಮಾಡಿದೆ ಎಂದು ಡಾ.ಸೌಮ್ಯ ತಿಳಿಸಿದರು.

ಈ ಬಾರಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ನೀಡುವಂತಹ ಪ್ರಶಸ್ತಿಗೆ ಸಚಿವ ಸಂತೋಷ್ ಲಾಡ್ ರವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಂತೋಷ್ ಲಾಡ್ ರವರು ಸಮಾಜದಲ್ಲಿ ಹಲವಾರು ಸಮಾಜಮುಖಿ ಸೇವೆಗಳ ಮುಖಾಂತರ ಜನರ ಆರೋಗ್ಯ ಹಾಗೂ ಜೀವಗಳ ರಕ್ಷಣೆಯ ಸಂದರ್ಭದಲ್ಲಿ ತನ್ನ ಜೀವ ಲೆಕ್ಕಿಸದೆ ನೆರವಿಗೆ ಧಾವಿಸಿರುವುದನ್ನು ಗಮನಿಸಿ ಗುರುತಿಸಲಾಗಿದೆ ಎಂದು ತಿಳಿಸಿದರು.
ಸಚಿವ ಸಂತೋಷ್ ಲಾಡ್ ರವರು ಕೇರಳದಲ್ಲಿ ಗುಡ್ಡ ಕುಸಿತ, ಒರಿಸ್ಸಾದಲ್ಲಿ ರೈಲು ದುರಂತ, ಕೇದಾರನಾಥದಲ್ಲಿ ಪ್ರವಾಹ, ಕೊರೋನಾ ಸಂದರ್ಭದಲ್ಲಿ ಸೇವೆ, 10,000 ಕ್ಕೂ ಹೆಚ್ಚು ರೈತರಿಗೆ ಉಚಿತ ಬೋರ್‌ವೆಲ್, 1,000ಕ್ಕೂ ಹೆಚ್ಚು ಉಚಿತ ಆಟೋಗಳನ್ನು ನೀಡಿರುವುದು, 25ಕ್ಕೂ ಹೆಚ್ಚು ರೈತರಿಗೆ ಜೆಸಿಬಿ ಉಚಿತವಾಗಿ ನೀಡಿರುವುದು ಇನ್ನೂ ಇವರ ಸಾವಿರಾರು ಸೇವೆಗಳನ್ನು ಮನಗಂಡು ಶ್ರೀಯುತರನ್ನು ಆಯ್ಕೆ ಮಾಡಲು ಸಂಜೀವಿನಿಯ ಬಳಗವು ಒಮ್ಮತದಿಂದ ನಿರ್ಧರಿಸಿರುವುದು ಕಾಣಬಹುದು ಎಂದು ತಿಳಿಸಿದರು.
ಸಚಿವ ಸಂತೋಷ್ ಲಾಡ್ ರವರಿಗೆ ಡಿಸೆಂಬರ್-23 ರಂದು ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ಪಂಚ ಮಠಾಧೀಶರುಗಳ ನೇತೃತ್ವದಲ್ಲಿ, ದಿನೇಶ್ ಅಮ್ಮಿನ್‌ಮಟ್ಟು ಸಮ್ಮುಖದಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುನೀತಾ ನರ್ಸಿಂಗ್ ಹೋಂ ವೈದ್ಯರಾದ ಡಾ.ಎನ್.ಸಂದೀಪ್ ನರಸಪ್ಪ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಧ್ಯಕ್ಷ ರಂಗನಾಥ್, ವಕೀಲ ಶಿವಕುಮಾರ್ ಇದ್ದರು.

