ಆದಿವಾಸಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸದಾ ಜೀವಂತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ-2026ರ ಅಂಗವಾಗಿ ಇದೇ ಡಿ.18ರಂದು ಚಿತ್ರದುರ್ಗ ನಗರದ ರಾಜವೀರ ಮದಕರಿ ನಾಯಕರ ಪ್ರತಿಭೆ ಬಳಿ ಉತ್ಸವದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಡಾ.ಗೆರೆಗಲ್ ಪಾಪಯ್ಯ ತಿಳಿಸಿದರು.

 ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವಅಂಗವಾಗಿ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

- Advertisement - 

       ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕು ಪೂಜಾರಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ತಿಪ್ಪೇಹಳ್ಳಿ (ಹೊನ್ನಿನ ಹಳ್ಳ) ಹತ್ತಿರ ಚಿನ್ನಹಗರಿ ನದಿ ಹರಿಯುತ್ತಿದ್ದು, ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 2026ರ ಜನವರಿ 15ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮ್ಯಾಸನಾಯಕ ಬುಡುಕಟ್ಟು ಜನರ ಸಾಂಸ್ಕøತಿಕ ಭಾಗವಾಗಿ ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ-2026” ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮವನ್ನು ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ಮತ್ತು ಚಿನ್ನಹಗರಿ ಪ್ರಕಾಶನ ಹಾಗೂ ಗಾದ್ರಿ ಪಾಲನಾಯಕ ದೇವಸ್ಥಾನ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ಉತ್ಸವ ಆಚರಿಸಲಾಗುತ್ತಿದ್ದು, ಈ ಬಾರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು.

- Advertisement - 

ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ಮಾತನಾಡಿ, ಮ್ಯಾಸ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ನಾಯಕಎಂಬ ಸಮನಾರ್ಥಕ ಪದ ಅಡಿಯಲ್ಲಿ 1976 ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ, ನಮ್ಮ ಮ್ಯಾಸ ನಾಯಕ ಬುಡಕಟ್ಟಿಗೂ ಮತ್ತು ನಾಯ್ಕಡ ಬುಡಕಟ್ಟಿಗೂ ಸಾಮ್ಯತೆ ಇರುವ ಬುಡಕಟ್ಟು ಲಕ್ಷಣಗಳನ್ನು ಅಧ್ಯಯನ ಮಾಡಿ ಪರಿಶೀಲಿಸಿ, ಈ ಎರಡೂ ಬುಡಕಟ್ಟುಗಳು ಒಂದೇ ಎಂದು ಭಾರತ ಸಂಸತ್ತು ನಮ್ಮನ್ನು ಪರಿಷ್ಟ ಪಂಗಡಕ್ಕೆ ಸೇರಿಸಿರುತ್ತದೆ.

ಆದ್ದರಿಂದ, ಈ ಅನನ್ಯ ಬಡುಕಟ್ಟು ಲಕ್ಷಣಗಳನ್ನು ಸಂರಕ್ಷಸಿಕೊಂಡು ಹೋಗುವುದು ನಮ್ಮ ಈ ಕಾರ್ಯಕ್ರಮದ ಉದ್ದೇಶ. ನಮ್ಮ ಬುಡಕಟ್ಟು ಲಕ್ಷಣಗಳನ್ನು ನಾಶಮಾಡಲು, ನಮ್ಮೊಳಗೆ ಅನ್ಯ ಜಾತಿಯವರು ನುಸಿಳಿದ್ದಾರೆ ಮತ್ತು ನಮ್ಮ ಮೀಸಲಾತಿ ಕದಿಯುತ್ತಿದ್ದಾರೆ ಇದರ ಬಗ್ಗೆ, ನಮ್ಮ ಮ್ಯಾಸ ನಾಯಕ ಬಂಧುಗಳನ್ನು ಎಚ್ಚರಿಸಲಾಗುವುದು ಎಂದರು.

ಮ್ಯಾಸ ನಾಯಕರಾದ ನಾವು, ಮುಖ್ಯವಾಹಿನಿಯಿಂದ ಬೇರೆಯೇ ಮ್ಯಾಸರ ಹಟ್ಟಿಗಳಲ್ಲಿ ವಾಸವಿರುವವರು. ನಮ್ಮದಲ್ಲದ ವೈದಿಕ ಪರಂಪರೆಯಿಂದ ದೂರ ಇದ್ದು, ಉದಿ-ಪದಿ ಸಂಪ್ರದಾಯ ಪಾಲಿಸಿಕೊಂಡು ಬಂದಿರುವವರು. ನಮ್ಮ ಪೂರ್ವಜರ ಅತ್ಮಗಳು ನಮ್ಮ ದೇವರ ಎತ್ತುಗಳಲ್ಲಿ ನೆಲೆಸಿವೆ ಎಂದು ದೇವರ ಎತ್ತುಗಳನ್ನೇ ದೇವರೆಂದು ಪೂಜಿಸುತ್ತಿರುವವರು.

ಇದೇ ಧಾರ್ಮಿಕ ನಂಬಿಕೆಯು ನಾಯ್ಕಡ ಪಂಗಡಲ್ಲಿಯೂ ಇರುತ್ತದೆ. ನಮ್ಮ ಮ್ಯಾಸನಾಯಕ ಬಡಕಟ್ಟು ನಾಯ್ಕಡ ಆದಿವಾಸಿ ಜನಾಂಗದಿಂದ ಬೇರ್ಪಟ್ಟು ಚಿತ್ರದುರ್ಗ, ಮೊಳಕಾಲ್ಮುರು, ಕೂಡ್ಲಿಗಿ ಭಾಗಕ್ಕೆ ಹೇಗೆ ಅಲೆಮಾರಿಗಳಾಗಿ ಬಂದರು ಎಂದು ಸಾಂಸ್ಕøತಿಕ ಇತಿಹಾಸ ನೆನಪಿಸಿಕೊಳ್ಳುವುದು ಈ ಉತ್ಸವದ ಆಚರಣೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

 ರಾಜ್ಯ ವಾಲ್ಮೀಕಿ ನಾಯಕರ ಮಹಾ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಲಕ್ಷ್ಮೀಸಾಗರ ಮಾತನಾಡಿ, ಬುಡಕಟ್ಟು ಜನರ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಎಲ್ಲಾ ಮ್ಯಾಸ ನಾಯಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮ್ಯಾಸಬೇಡ (ಮ್ಯಾಸನಾಯಕ) ಬುಡಕಟ್ಟು ಸಂಸ್ಕøತಿ ಸಂರಕ್ಷಣಾ ಸಮಿತಿ ಉಪಾಧ್ಯಕ್ಷ ಸಿ.ಎಸ್.ಜೋಗೇಶ್, ಸಂಚಾಲಕರಾದ ಕೆ.ಬಿ.ಓಬಣ್ಣ, ಎನ್.ನಟರಾಜ್, ಸದಸ್ಯ ಕೆ.ಟಿ.ನಾಗೇಶ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸತ್ಯನಾರಾಯಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ದೇವರಾಜ್ ಇದ್ದರು.

Share This Article
error: Content is protected !!
";