ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜೈಪುರದ ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯಕ ಸಮಿತಿ ಹಾಗೂ ರೋಟರಿ ಬೆಂಗಳೂರು ಪೀಣ್ಯಾ ಸಂಘಟನೆಯಿಂದ 28ನೇ ವರ್ಷದ ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರವನ್ನು ಜನವರಿ 3 ರಿಂದ 9 ರವರೆಗೆ ಆಯೋಜಿಸಲಾಗಿದೆ.
ಶಿವಾಜಿನಗರ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಗಣೇಶ್ ಬಾಗ್, ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್, ಭಗವಾನ್ ಮಹಾವೀರ ರಸ್ತೆ, ಇಲ್ಲಿ ಶಿಬಿರ ನಡೆಯುತ್ತಿದ್ದು, ದಿವ್ಯಾಂಗರಿಗೆ ಉಚಿತವಾಗಿ ಪರಿಕರಗಳನ್ನು ಅಳವಡಿಸಲಾಗುತ್ತಿದೆ ಎಂದು ಲಿಂಬ್‌ಕ್ಯಾಂಪ್‌ಅಧ್ಯಕ್ಷರಾದ ರೋಟರಿ ಜಿ.ಆರ್.ವಸಂತ್‌ಕುಮಾರ್‌ತಿಳಿಸಿದ್ದಾರೆ.
ಈ ಶಿಬಿರವು ಏಳು ದಿನಗಳ ಕಾಲ ಇರಲಿದ್ದು, ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ನ ಮೂರು ನಕಲಿ ಪ್ರತಿಗಳನ್ನು ತರಬೇಕು. ದಿವ್ಯಾಂಗರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಶಿಬಿರದ ಮಾರ್ಗದರ್ಶಕ ಗೌತಮ್‌ಚಂದ್‌ನಹಾರ್‌ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ- 9845052554 ಮತ್ತು 9341214915 ಸಂಖ್ಯೆಗೆ ಸಂಪರ್ಕಿಸಬೇಕಿಸುವಂತೆ ಕೋರಲಾಗಿದೆ.

