ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಿಸರ್ಗ ಯೋಗ ಕೇಂದ್ರದ ಯೋಗ ಪಟು ಕುಮಾರಿ ಜಾಹ್ನವಿ ಎಂ. ಆರ್. ರವರಿಗೆ ಅವರ ಸಾಧನೆಯನ್ನು ಗುರುತಿಸಿ ಧಾರವಾಡದ ಕರ್ನಾಟಕ ಬಾಲವಿಕಾಸ ಅಕಾಡೆಮಿ ಬಾಲ ಗೌರವ ಪ್ರಶಸ್ತಿ ನೀಡಿ ಗೌರವಿಸಿದೆ.
ದೊಡ್ಡಬಳ್ಳಾಪುರಕ್ಕೆ ಕೀರ್ತಿ ತಂದ ಜಾಹ್ನವಿ ರವರನ್ನು ಕರ್ನಾಟಕ ಸ್ಟೇಟ್ ಅಮೆಚ್ಯುರ್ ಯೋಗ ಸ್ಪೋರ್ಟ್ಸ್ ಅಶೋಸಿಯೇಷನ್ ಗೌರವ ಕಾರ್ಯದರ್ಶಿ ಎ. ನಟರಾಜ್ (ಯೋಗ ), ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಶೋಸಿಯೇಷನ್
ಅಧ್ಯಕ್ಷರಾದ ಪ್ರೊಫೆಸರ್ ಎಂ. ಜಿ.ಅಮರನಾಥ್, ಖಜಾಂಚಿ ಕೆ. ಆರ್. ಶ್ಯಾಮ ಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.

