ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೆದೇಹಳ್ಳಿ ರಸ್ತೆಯ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಬ್ರಹ್ಮೋತ್ಸವ ಪೂಜೆಯಲ್ಲಿ ಧ್ವಜ ಕಂಬಕ್ಕೆ ಪೂಜೆ ಮಾಡಿ ತದನಂತರ ಧ್ವಜಾರೋಹಣದ ಮಾಡಲಾಯಿತು.
ಮೂರನೇ ದಿನದ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಮಹಾಗಣಪತಿ ಹೋಮ, ಸುದರ್ಶನ ಹೋಮ, ಅಭಿಷೇಕ, ಉಶಂ ಪೂಜೆ, ಅಭಿಷೇಕ, ನವಕಂಪ, ಕಳಸ ಪೂಜೆ, ಅಷ್ಟ ದೇವತೆಗಳಿಗೆ ಬಲಿಯನ್ನು ಅರ್ಪಿಸಲಾಯಿತು.
ಕೇರಳದ ಅರ್ಚಕರದ ಶ್ರೀ ವಿಷ್ಣು ಭಟ್ಟಾದ್ರಿ ಪಾಡ್ ತಂತ್ರಿಗಳು ತ್ರೀಚೂರು ಹಾಗೂ ಸತೀಶ್ ಶರ್ಮ ಸಂಗಡಿಗರಿಂದ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೇರಳದ ಚಂಡೇವಾದ್ಯ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಶರಣ್ ಕುಮಾರ್, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಕಾರ್ಯದರ್ಶಿ ಎಂ ಪಿ ವೆಂಕಟೇಶ್, ಪದಾಧಿಕಾರಿಗಳಾದ ವಿ ಜಿ ಮೋಹನ್, ಜಗದೀಶ್, ಸೂರಯ್ಯ, ಇಂದ್ರಣ್ಣ, ಚಂದ್ರಶೇಖರ್, ದೇವಸ್ಥಾನದ ಗುರುಸ್ವಾಮಿ, ರಮೇಶ್ ಬ್ರಹ್ಮೋತ್ಸವದ ಸೇವಾ ಕರ್ತರುಗಳು ಉಪಸ್ಥಿತರಿದ್ದರು.

