ಕೈಗಾರಿಕೆಗೆ 500 ಎಕರೆ ಗುರುತಿಸಿ ಅಧಿಸೂಚನೆ ಹೊರಡಿಸಲು ಜೆಡಿಎಸ್ ಸವಾಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಾಯಿಚಪಲಕ್ಕೆ ಮಾತಾನಾಡುವ ಮಂಡ್ಯ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಶಾಸಕರೇ, ನಿಮಗೆ ನಿಜಕ್ಕೂ ಮಂಡ್ಯ ಜನರ ಬಗ್ಗೆ ಕನಿಷ್ಟ ಕಾಳಜಿ ಇದ್ದರೆ ಮೊದಲು ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಗುರುತಿಸಿ, ಸರ್ಕಾರದಿಂದ ಅಧಿಸೂಚನೆ ಹೊರಡಿಸಿ. ಬಳಿಕ ನಿಮ್ಮ ಜಂಭದ ಮಾತುಗಳನ್ನು ಮುಂದುವರಿಸಿ ಎಂದು ಜೆಡಿಎಸ್ ಸವಾಲ್ ಹಾಕಿದೆ.

ಮಂಡ್ಯ ಜಿಲ್ಲೆಗೆ ಕೈಗಾರಿಕೆ ತರಲು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಯತ್ನದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರವಾಗಲಿ, ಮಂಡ್ಯ ಜಿಲ್ಲೆಯ ಶಾಸಕರಾಗಲಿ,

- Advertisement - 

ಈ ವಿಚಾರದಲ್ಲಿ ಒಮ್ಮೆಯಾದರೂ ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ಲ, ಚರ್ಚಿಸಿಲ್ಲ. 2.5 ವರ್ಷಗಳಿಂದ ಅವರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಾ, ಟೀಕೆಗಳಲ್ಲೇ ಕಾಲಹರಣ ಮಾಡುತ್ತಿದ್ದೀರಿ ಎಂದು ಜೆಡಿಎಸ್ ಟೀಕಾಪ್ರಹಾರ ಮಾಡಿದೆ.

ಭದ್ರಾವತಿಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ  ಕ್ರಮವಹಿಸಿದ್ದಾರೆ. ಈಗಲು ಕಾಲ ಮಿಂಚಿಲ್ಲ. ನಿಮ್ಮ ಒಣ ಪ್ರತಿಷ್ಠೆ ಬದಿಗಿಟ್ಟುಕೈಗಾರಿಕೆಗೆ ಜಾಗ ಹುಡುಕಿ, ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿ ರಾಜ್ಯದ ಅಭಿವೃದ್ಧಿಗೆ  ಕೈಜೋಡಿಸಿ ಎಂದು ಜೆಡಿಎಸ್ ತಾಕೀತು ಮಾಡಿದೆ.

- Advertisement - 

 

Share This Article
error: Content is protected !!
";