ಶಿಕ್ಷಕ ದಂಪತಿಯಿಂದ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ

News Desk

ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಶಿಕ್ಷಕ ದಂಪತಿ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ನಗರದಲ್ಲಿ ಜರುಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ
ಎಸ್​ಪಿ ಸಿದ್ದಾರ್ಥ ಗೋಯಲ್‌ಪ್ರತಿಕ್ರಿಯಿಸಿ, ಬಾಗಲಕೋಟೆಯಲ್ಲಿ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆ ಇದೆ.ಅಕ್ಷಯ್ ಇಂದುಲ್ಕರ್ ಹಾಗೂ ಆನಂದಿ ದಂಪತಿ ಶಾಲೆ‌ನಡೆಸುತ್ತಾರೆ.

ಬಾಲಕನ‌ಮೇಲೆ‌ಹಲ್ಲೆ ಮಾಡುವ ದೃಶ್ಯ ಸಿಕ್ಕಿದೆ. ಮೂರು ತಿಂಗಳ ಹಿಂದೆ ನಡೆದ ಘಟನೆ ಇದು. ಮೊದಲು ಆ ಶಾಲೆಯಲ್ಲಿ ಓರ್ವ ಮಹಿಳೆ ಕೆಲಸ ಮಾಡುತ್ತಿದ್ದರು. ಅವರನ್ನು ‌ಕೆಲಸದಿಂದ ತೆಗೆದ ಮೇಲೆ ವಿಡಿಯೋ ಬಹಿರಂಗಪಡಿಸಿದ್ದಾರೆ.

- Advertisement - 

ಬಾಲಕನ ತಂದೆ, ತಾಯಿ ನವನಗರ ಠಾಣೆಗೆ ದೂರು ನೀಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

 

- Advertisement - 

Share This Article
error: Content is protected !!
";