ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಳಗಾವಿ ಅಧಿವೇಶನ ಮುಗಿಸಿ ಬೆಂಗಳೂರಿಗೆ ಶನಿವಾರ ಬೆಳಿಗ್ಗೆಯಷ್ಟೆ ಬಂದಿಳಿದಿದ್ದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ(63) ಹೃದಯಾಘಾತದಿಂದ ಮೃತಪಟ್ಟಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಕೆಯುಡಬ್ಲ್ಯೂಜೆ ಸಂತಾಪ:
ಸಂಜೆವಾಣಿ,ಇಂದು ಸಂಜೆ ಪತ್ರಿಕೆ ವರದಿಗಾರರಾಗಿ, ಪ್ರೆಸ್ ಕ್ಲಬ್ ನಲ್ಲೂ ಹಲವಾರು ಬಾರಿ ಪದಾಧಿಕಾರಿಯಾಗಿ ಕ್ರೀಯಾಶೀಲ ಸಂಘಟಕರಾಗಿದ್ದ ದೊಡ್ಡಬೊಮ್ಮಯ್ಯ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸಂತಾಪ ವ್ಯಕ್ತಪಡಿಸಿದ್ದಾರೆ.

