ಬಾರ್ ಸ್ಥಾಪನೆಗೆ ವಿರೋಧ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹಾಡೋನಹಳ್ಳಿ ಗ್ರಾಮದಲ್ಲಿನ ಗ್ರಾಮಸ್ಥರನ್ನು ಮತ್ತು ವಿದ್ಯಾರ್ಥಿ ಯುವ ಸಮೂಹವನ್ನು ಕುಡಿತದ ಚಟಕ್ಕೆ ದೂಡಲು ಉದ್ದೇಶಿಸಿ ಗ್ರಾಮದಲ್ಲಿ ಈಗಾಗಲೇ ಇರುವ ಬಾರ್ ಜೊತೆಗೆ ಮತ್ತೊಂದು ಬಾರ್ ಆರಂಭಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು ಎಂದು  ಹಾಡೋನಹಳ್ಳಿ ಗ್ರಾಮಸ್ಥರ ಪರವಾಗಿ ಪಂಚಾಯಿತಿ  ಸದಸ್ಯ ಆನಂದ್ ಕುಮಾರ್ ಹೆಚ್.ಕೆ ಅವರು ಅಬಕಾರಿ  ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಅವರು ಈ ಕುರಿತು  ಪ್ರತಿಕ್ರಿಯಿಸಿ ಗ್ರಾಮದಲ್ಲಿ ಈಗಾಗಲೇ ಒಂದು ಬಾರ್‌ಇರುವಾಗಲೇ ಮತ್ತೊಂದು ಸಿಎಲ್ 7 ಬಾರ್ ನಿರ್ಮಾಣ ಮಾಡಲಾಗುತ್ತಿದೆ. ಗ್ರಾಮದಲ್ಲಿ ಶಾಂತಿ ವಾತಾವರಣ ಮತ್ತು ಗ್ರಾಮಸ್ಥರ ಆರೋಗ್ಯದ ದೃಷ್ಠಿಯಿಂದ ಬಾರ್ ಗೆ ನೀಡಿರುವ ಪರವಾನಿಗೆ ರದ್ದುಮಾಡಬೇಕೆಂದು ಅಬಕಾರಿ    ಇನ್ಸ್ಪೆಕ್ಟರ್  ರಾಘವೇಂದ್ರರವರಿಗೆ ಮನವಿ ಮಾಡಲಾಗಿದೆ.

- Advertisement - 

ದಾರ್ಮಿಕ ಸ್ಥಳವಾದ ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ  ಹಾಡೋನಹಳ್ಳಿ ಗ್ರಾಮಕ್ಕೆ 2 ರಿಂದ 3 ಕೀಲೋ ಮೀಟರ್ ದೂರದಲ್ಲಿದ್ದು  ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮುಖ್ಯರಸ್ತೆಯಲ್ಲಿ ಸಿಎಲ್ 7 ಬಾರ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹಾಡೋನಹಳ್ಳಿ ಗ್ರಾಮದ ಸರ್ಕಲ್‌ನಲ್ಲಿ ಬಾರ್ ಸ್ಥಾಪಿಸಲಾಗಿದೆ. ಈ ಬಾರ್‌ನಿಂದಾಗಿ ಗ್ರಾಮಸ್ಥರು ನಿತ್ಯ ಕುಡಿತದ ಚಟಕ್ಕೆ ಬಿದ್ದು ಕೆಲಸ ಕಾರ್ಯಗಳಿಗೆ ಹೋಗದೆ  ಮನೆಗಳಲ್ಲಿ ಕಲಹಗಳಾಗುತ್ತಿವೆ.

ಗ್ರಾಮದಲ್ಲಿ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಹಾಗು ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿತ್ಯ ಈ ಸರ್ಕಲ್ ಮಾರ್ಗವಾಗಿಯೇ ಓಡಾಡಬೇಕಾಗುತ್ತದೆ. ಇದರಿಂದ ಮಕ್ಕಳ ಓದುವ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಷ್ಟೇ ಅಲ್ಲದೇ ಗ್ರಾಮದ ಯುವ ಜನತೆಯು ಕುಡಿತದ ಚಟಕ್ಕೆ ದಾಸರಾಗುತ್ತಿದ್ದಾರೆ.

- Advertisement - 

ಮುಖ್ಯವಾಗಿ ನಿತ್ಯ ಘಾಟಿ ದೇವಾಲಯಕ್ಕೆ ಬರುವ ಸಾವಿರಾರು ಭಕಾದಿಗಳಿಗೆ ಇದರಿಂದತೊಂದರೆಯಾಗುತ್ತಿದೆ. ಆದ್ದರಿಂದ ಗ್ರಾಮದ ಸರ್ಕಲ್‌ನಲ್ಲಿ ಈಗಾಗಲೇ ಇರುವ ಬಾ‌ರ್ ಜೊತೆಗೆ ಹೊಸದಾಗಿ ಬಾರ್ ನಿರ್ಮಾಣ ಮಾಡಲು ಮುಂದಾಗಿರುವ ಎರಡೂ ಬಾರ್‌ಗಳ ಪರವಾನಗಿಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ.

Share This Article
error: Content is protected !!
";