ಚಂದ್ರವಳ್ಳಿ ನ್ಯೂಸ್, ವಿಜಯನಗರ:
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಆಯುಷ್ಮಾನ್ ಆಸ್ಪತ್ರೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎರಡು ಹನಿ ಪೋಲಿಯೋ ಹಾಕುವ ಮೂಲಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯನಗರ ಸಾಮ್ರಾಜ್ಯದ ಆಡಳಿತ ಸರ್ವಕಾಲಕ್ಕೂ ಪ್ರೇರಣೆ. ರಾಜರ ಆಳ್ವಿಕೆಯ ಕಾಲದ ಜನಜೀವನ, ಕಲೆ, ವ್ಯಾಪಾರ, ಮಾರುಕಟ್ಟೆ ಎಲ್ಲವನ್ನೂ ಪ್ರೇರಣೆಯಾಗಿ ಪಡೆದುಕೊಂಡಿದ್ದೇವೆ. ವಿಕಸಿತ ಭಾರತ ನಿರ್ಮಿಸುವಲ್ಲಿ ಈಗಾಗಲೇ ಭಾರತ ಸರ್ಕಾರ ಮುಂದಡಿ ಇಟ್ಟಿದೆ. ಜಿಲ್ಲೆ ಇದರ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಇಲ್ಲಿನ ಪ್ರದೇಶವನ್ನು ಸಂಪೂರ್ಣ ಹಸಿರುಮಯವಾಗಿಸುವ ಯೋಜನೆಯನ್ನು ವಿಜಯನಗರ ಜಿಲ್ಲಾಡಳಿತ ಸಾಕಾರ ಮಾಡಲಿದೆ. ರಾಷ್ಟ್ರದ ಕನಸನ್ನು ವಿಜಯನಗರ ಜಿಲ್ಲೆಯಿಂದ ಸಾಕ್ಷಾತ್ಕಾರ ಮಾಡಲು ನಾನು ಇಲ್ಲಿ ಬಂದಿದ್ದೇನೆ ಎಂದರು.
ಈ.ತುಕಾರಾಂ, ಶಾಸಕ ಹೆಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ, ಡಿಸಿ, ಎಸ್ಪಿ, ಸಿಇಒ ಸೇರಿ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

