ಚಂದ್ರವಳ್ಳಿ ನ್ಯೂಸ್, ಬಾಗಲಕೋಟೆ:
ಕರ್ನಾಟಕ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಇನ್ನಿಲ್ಲ ಪ್ರಯತ್ನ ನಡೆದಿದೆ. ನಾ ಬಿಡೆ, ನೀ ಕೊಡೆ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಥಳೀಯವಾಗಿಯೇ ಗೊಂದಲ ನಿವಾರಿಸಿಕೊಳ್ಳಿ ಎನ್ನುವ ಸಂದೇಶ ನೀಡಿದ್ದಾರೆ.
ಆದರೂ ಮುಖ್ಯಮಂತ್ರಿ ಆಗ ಬದಲಾಗುತ್ತಾರೆ, ಈಗ ಬದಲಾಗುತ್ತಾರೆ ಎಂಬ ಚರ್ಚೆಗಳು ದಿನ ಕಳೆದಂತೆ ಜೋರಾಗುತ್ತಲೇ ಇವೆ. ಬ್ರೇಕ್ ಫಾಸ್ಟ್ ಮೀಟಿಂಗ್, ನಾಟಿ ಕೋಳಿ ಸಾರ್ ಊಟದ ಬಳಿಕ ಬಗೆಹರಿಯಿತು ಎನ್ನುವಷ್ಟರಲ್ಲೇ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಿಎಂ ಕುರ್ಚಿ ಕದನ ಜೋರಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಮತ್ತೆ ಕ್ರಿಯಾಶೀಲವಾಗಿ ತಮ್ಮ ವಿರೋಧಿ ಗುಂಪಿನ ನಾಯಕರ ಭೇಟಿ ಮಾಡುತ್ತಲೇ ನಾನಾ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯ ಬಾಗಲಕೋಟೆಯ ಖ್ಯಾತ ಜ್ಯೋತಿಷಿ ಒಬ್ಬರು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎನ್ನುವ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯ ಬಬಲೇಶ್ವರ ಜ್ಯೋತಿಷಿಮನೆತನದ ಬಾಗಲಕೋಟೆಯ ಖ್ಯಾತ ಜ್ಯೋತಿಷಿಉಲ್ಲಾಸ್ ಜೋಶಿ ಎನ್ನುವರು ಜನವರಿಗೆ 15ರೊಳಗೆ ಡಿಕೆ ಶಿವಕುಮಾರ್ ಮುಖ್ಯಮಮತ್ರಿ ಆಗುತ್ತಾರೆ ಎಂದು ಖಡಕ್ ಜೋತಿಷ್ಯ ನುಡಿದಿದ್ದಾರೆ.
ಅಷ್ಟೇ ಅಲ್ಲದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜೋತಿಷಿಗಳು ಸಿಎಂ ಡಿಕೆ ಶಿವಕುಮಾರ್ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಭವಿಷ್ಯ ನುಡಿಯುವ ಮೂಲಕ ಗಮನ ಸೆಳೆದಿದ್ದಾರೆ.

ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸೋದನ್ನೇ ಭವಿಷ್ಯ ಹೇಳುತ್ತೇನೆ. ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ನುಡಿಸುತ್ತಾರೆ. ಈವರೆಗೂ ಅನೇಕಜನರಿಗೆ ಭವಿಷ್ಯ ಹೇಳಿದ್ದೇನೆ, ಒಂದು ಸುಳ್ಳಾಗಿಲ್ಲ. ಯಾರೊಬ್ಬರೂ ಸುಳ್ಳಾಗಿದೆ ಅಂತ ಬಂದಿಲ್ಲ ಎಂದ ಹೇಳಿದ್ದಾರೆ. ಹೀಗಾಗಿ ಜೋತಿಷಿ ಹೇಳಿರುವ ಈ ಭವಿಷ್ಯ ಎಷ್ಟು ನಿಜವಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

