ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಚಿತ್ರದುರ್ಗ, ನ್ಯಾಫೆಡ್, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲ ಬೆಂಗಳೂರು ಮತ್ತು ಚಿತ್ರದುರ್ಗ ಶಾಖೆ ಹಾಗೂ ಈಶ ರೈತ ಉತ್ಪಾದನಾ ಕೇಂದ್ರ ಹಿರಿಯೂರು ಇವರುಗಳ ಸಹಭಾಗಿತ್ವದಲ್ಲಿ ಹಿರಿಯೂರು ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆ ಸಮಿತಿ ಆವರಣದಲ್ಲಿ
ತೊಗರಿ ಖರೀದಿ ಕೇಂದ್ರದ ತೊಗರಿ ಬೆಳೆ ರೈತರ ನೋಂದಣಿ ಪ್ರಕ್ರಿಯೆಗೆ ಯೋಜನಾ ಮತ್ತು ಸಾಂಖಿಕ ಇಲಾಖೆ ಸಚಿವ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಚಾಲನೆ ನೀಡಿದರು.
ಸಚಿವ ಸುಧಾಕರ್ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ ಜಿಲ್ಲೆಯ ಹಾಗೂ ವಿಶೇಷವಾಗಿ ಹಿರಿಯೂರು ತಾಲ್ಲೂಕಿನ ರೈತರು ಈ ಖರೀದಿ ಕೇಂದ್ರಕ್ಕೆ ಬಂದು ತಮ್ಮ ದಾಖಲೆಗಳೂಂದಿಗೆ ನೋಂದಣಿ ಮಾಡಿಸಿಕೊಂಡು ಸರ್ಕಾರದ ಬೆಂಬಲ ಬೆಲೆ ರೂ.8000 ರೂಗಳಿಗೆ ಮಾರಾಟಮಾಡುವ ಮೂಲಕ ರೈತರು ಸದುಪಯೋಗ ಪಡಿಸಿ ಕೊಳ್ಳುವಂತೆ ಕೋರಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ ರೈತರು ತಮ್ಮ ಆಧಾರ್ ಕಾರ್ಡ್. ಪಹಣಿ ಮತ್ತು ಎಫ್.ಐ.ಡಿ ದಾಖಲೆಗಳೂಂದಿಗೆ ಈಶ ರೈತ ಉತ್ಪಾದಕ ಸಂಸ್ಥೆ ಹಿರಿಯೂರು ಇವರಿಗೆ ಸಲ್ಲಿಸಿ ನೋಂದಾಯಿಸಿಕೊಳ್ಳಲು ಹಾಗೂ ಸರ್ಕಾರದ ನಿಯಮದಂತೆ ಗುಣಮಟ್ಟದ ತೋಗರಿಯನ್ನ ಕೇಂದ್ರ ನೀಡಲು ರೈತರಲ್ಲಿ ಮನವಿಮಾಡಿದರು
ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘ ಮಹಾಮಂಡಲ ಬೆಂಗಳೂರು ನಿರ್ದೇಶಕ ಕೆ.ಜಗದೀಶ ಕಂದಿಕೆರೆ ಮಾತನಾಡಿ ಹಿರಿಯೂರು ತಾಲ್ಲೂಕಿನ ರೈತರು ಸರ್ಕಾರದ ಮತ್ತು ನಮ್ಮ ಸಚಿವರ ಪರಿಶ್ರಮದಿಂದ ತಾಲ್ಲೂಕಿನ ತೊಗರಿ ಬೆಳೆದ ರೈತರಿಗೆ ಖರೀದಿ ಕೇಂದ್ರ ಆರಂಭಿಸಿದ್ದು ಇದಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಹಕಾರದಿಂದ ಬಂದಿದೆ. ಉತ್ತಮ ಬೆಲೆ 8000 ರೂ.ಗಳ ಬೆಂಬಲೆ ಬೆಲೆಯೊಂದಿಗೆ ಖರೀದಿಯಿಂದ ರೈತರಿಗೆ ಅನುಕೂಲವಾಗುತ್ತದೆ ಇದರ ಸದುಪಯೋಗ ಪಡಿಸೊಕೊಳ್ಳುವಂತೆ ಕೋರಿದರು.

ತಹಶೀಲ್ದಾರ್ ಎಂ.ಸಿದ್ದೇಶ್, ಹಿರಿಯೂರು ಸಹಾಯಕ ಕೃಷಿ ನಿರ್ದೇಶಕ ಆರ್.ಅಶೋಕ್, ಎಪಿಎಂಸಿ ಕಾರ್ಯದರ್ಶಿ ಹರ್ಷ, ಪೌರಾಯುಕ್ತ ಎ.ವಾಸೀಂ, ಬಸವೇಶ್ವರ ನ್ಯಾಫೆಡ್ ಚಿತ್ರದುರ್ಗ, ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ಜೆ.ರಮೇಶ್, ಮಹೇಶ್ ದಿಂಡಾವರ, ಆರ್ ಸರಸ್ಪತಿ, ಈಶ ರೈತ ಉತ್ಪಾದಕ ಕೇಂದ್ರದ ಅಧ್ಯಕ್ಷ ಕಂದಿಕೆರೆ ಜಗದೀಶ್, ಸಿಇಒ ಮುರುಳಿಯಾದವ್, ಸಿಬ್ಬಂದಿ, ರೈತ ಮುಖಂಡರುಗಳು ಹಾಗೂ ಹಲವು ರೈತರು ಹಾಜರಿದ್ದರು.

