ಅಪರಾಧಗಳ ತಡೆಗೆ ಪೊಲೀಸರ ಜೊತೆಗೆ ಸಾರ್ವಜನಿಕರ ಸಹಕಾರವೂ ಮುಖ್ಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಧರ್ಮಪುರ:
ಅಪರಾಧ ತಡೆ ಮಾಸಾಚರಣೆ-2025 ರ ಅಂಗವಾಗಿ ಧರ್ಮಪುರ ಗ್ರಾಮದಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣಾ ವತಿಯಿಂದ ಕಳ್ಳತನ, ಸರಗಳ್ಳತನ, ಮನೆಗಳ್ಳತನ, ಸೈಬರ್ ಅಪರಾಧಗಳು, ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಇತರ ವಿಷಯಗಳ ಬಗ್ಗೆ ಸಾರ್ವಜನಿಕರಿಗೆ, ಆಟೋ ಚಾಲಕರಿಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು.

ಅಬ್ಬಿನಹೊಳೆ ಪೊಲೀಸ್ ಠಾಣೆಯ ಮುಖ್ಯ ಪೇದೆ ದೇವೇಂದ್ರಪ್ಪ ಮಾತನಾಡಿ ಕೇವಲ ಪೊಲೀಸರಿಂದ ಅಪರಾಧಗಳ ತಡೆ ಸಾಧ್ಯವಿಲ್ಲ. ಇದಕ್ಕೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದು ತಿಳಿಸಿದರು.

- Advertisement - 

ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ಮಾಹೆಯನ್ನು ಅಪರಾಧ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

- Advertisement - 

ಅಪರಾಧ ಪ್ರಕರಣಗಳ ಬಗ್ಗೆ ವಿದ್ಯಾರ್ಥಿ, ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಅಪರಾಧ ತಡೆಗಟ್ಟುವ ಮಾಸಾಚರಣೆ ಆಯೋಜಿಸಲಾಗಿದೆ ಎಂದು ಮುಖ್ಯಪೇದೆ ದೇವೇಂದ್ರಪ್ಪ ತಿಳಿಸಿದರು.

ಎಚ್ಚರಿಕೆಯಿಂದ ಇದ್ದರೆ ನಾಗರೀಕರು ಕೂಡ ಅಪರಾಧವನ್ನ ತಡೆಗಟ್ಟಬಹುದು. ಗ್ರಾಮದಲ್ಲಿ ಅಪರಿಚಿತರು, ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದರೆ ಅಂಥವರ ಮಾಹಿತಿಯನ್ನ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಬೀಟ್ ಸಿಬ್ಬಂದಿಗಳಿಗೆ ತಿಳಿಸಿ ಎಂದು ಮುಖ್ಯ ಪೇದೆ ದೇವೇಂದ್ರಪ್ಪ ಹೇಳಿದರು.

ಇದೇ ಸಂದರ್ಭದಲ್ಲಿ ಧರ್ಮಪುರ ಗ್ರಾಮದ ಆಟೋ ಚಾಲಕರಿಗೆ ಅಪರಾಧ ತಡೆಯುವಲ್ಲಿ ನಿಮ್ಮಗಳ ಪಾತ್ರ ಮತ್ತು ಪ್ರಾಮುಖ್ಯತೆ ಏನೆಂದು ಅವರು ವಿವರವಾಗಿ ತಿಳಿಸಿ ಹೇಳಿದರು.

 

 

Share This Article
error: Content is protected !!
";