ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೆಮೋಗ್ರಾಫಿ, ಎಂಡೋಸ್ಕೋಪಿ ಸೌಲಭ್ಯಗಳನ್ನು ಹೊಸದಾಗಿ ಪ್ರಾರಂಭ ಮಾಡಲಾಗಿದೆ.
ಮೆಮೋಗ್ರಾಫಿ-ಸ್ತನ ತೊಂದರೆಗಳಿಗೆ ಸ್ತನ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಎಂಡೋಸ್ಕೋಪಿ-ಅನ್ನನಾಳ, ಉದರ, ದೊಡ್ಡ ಕರುಳು ಸ್ಕ್ಯಾನಿಂಗ್, Colonoscopy, Upper-GI Scopy ಮಾಡಲಾಗುತ್ತದೆ.
ರೋಗಿಗಳು ಮತ್ತು ಸಾರ್ವನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ತಿಳಿಸಿದ್ದಾರೆ.

