ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬೆಳವಂಗಲ ಹೋಬಳಿ ಕಾರೇಪುರ ಗ್ರಾಮದಲ್ಲಿ ರೈತರು, ಕೃಷಿ ಇಲಾಖೆ, ಕೃಷಿಕ ಸಮಾಜ, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ರೈತ ದಿನಾಚರಣೆಯನ್ನು ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲ್ಲೂಕಿನ ಶಾಸಕ ದೀರಜ್ ಮುನಿರಾಜ್ ಮಾತನಾಡಿ ರೈತನೇ ದೇಶದ ಬೆನ್ನೆಲುಬು. ಜಗದ ಹಸಿವು ನೀಗಿಸುವ ಅನ್ನದಾತನಿಗೊಂದು ನಮನ. ರೈತ ತಾನು ಬೆವರು ಸುರಿಸಿ ದುಡಿದರೆ ಮಾತ್ರ ನಾವು ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ತಾವು ಹಸಿದಿದ್ದರೂ, ಕಷ್ಟದಲ್ಲಿದ್ದರೂ, ಕಷ್ಟಪಟ್ಟು ಬೆವರು ಸುರಿಸಿ ದುಡಿದು ಬೇರೆಯವರಿಗೆ ಹೊಟ್ಟೆ ತುಂಬಿಸುವ ರೈತನನ್ನು ಗೌರವಿಸಬೇಕು.
ಭಾರತವು ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಲಕ್ಷಾಂತರ ಜನರ ಜೀವನೋಪಾಯ ಮತ್ತು ದೇಶದ ಆಹಾರ ಭದ್ರತೆ, ಹೆಚ್ಚಿನ ಪಾಲಿನ ಆರ್ಥಿಕತೆ ಕೃಷಿಯನ್ನೇ ಅವಲಂಬಿಸಿರುವುದು.ಈ ಕೃಷಿ ಸಂಸ್ಕೃತಿ ಮತ್ತು ಅನ್ನದಾತರ ಕೊಡುಗೆ, ಕಠಿಣ ಪರಿಶ್ರಮ ರೈತರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಧ್ವನಿ ಎತ್ತಲು ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರೀಯ ರೈತರ ದಿನವನ್ನು ಆಚರಿಸಲಾಗುತ್ತದೆ. ಎಂದರು
ರೈತರಿಗೆ ಶಾಸಕರಿಂದ ರೈತರಿಗೆ ಕೃಷಿ ಯಂತ್ರೋಪಕರಣ ಮತ್ತು ತುಂತುರು ನೀರಾವರಿ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಾ.ರಾಘವೇಂದ್ರ, ರೈತ ಸಂಘ, ಕೆ.ವಿ.ಕೆ.ವಿಜ್ಞಾನಿಗಳು, ದೊಡ್ಡ ಬೆಳವಂಗಲ ಗ್ರಾ.ಪ. ಅಧ್ಯಕ್ಷೆ ಕಲಾವತಿ ಕೃಷ್ಣಮೂರ್ತಿ, ಗ್ರಾಂ . ಪ.ಸದಸ್ಯರುಗಳು, ವಿವಿಧ ಇಲಾಖೆಗಳ ಸಿಬ್ಬಂದಿಗಳು, ಹಾಗೂ ಕಾರೇಪುರ ಗ್ರಾಮಸ್ಥರು ಹಾಜರಿದ್ದರು.

