ಲಂಚ ಸ್ವೀಕರಿಸುವಾಗ ಎಸಿಪಿ ಕೃಷ್ಣಮೂರ್ತಿ ಬಂಧನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೋಟೆಲ್​​​ ವ್ಯವಸ್ಥಾಪಕರಿಂದ ಲಂಚ ಸ್ವೀಕರಿಸುತ್ತಿದ್ದ ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಾಜಾಜಿನಗರದ ಸಾಗರ್​ ಹೋಟೆಲ್​​​​ ವ್ಯವಸ್ಥಾಪಕ ಸಂಜಯ್​​​​​​ ಕುಮಾರ್ ಅವರು​​​​ ಅವಧಿ ಮೀರಿ ಕಾರ್ಯನಿರ್ವಹಣೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದು ಆಗ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ನೀಡಲು ಮನಸ್ಸಿಲ್ಲದಿದ್ದ ಕಾರಣ ಅವರು ಲೋಕಾಯುಕ್ತರಿಗೆ ದೂರಿ ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್​​​​​​​ ಕಾರ್ಯಾಚರಣೆ ಕೈಗೊಂಡು ಎಸಿಪಿ ಬಂಧಿಸಿದ್ದಾರೆ.

- Advertisement - 

ಅವಧಿ ಮೀರಿದ ಬಳಿಕವೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಆರೋಪದಡಿ ರಾಜಾಜಿನಗರದ ಸಾಗರ್​​ ಹೋಟೆಲ್​​​ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಸಂಬಂಧ ವಿಚಾರಣೆ ನಡೆಸಿದ್ದ ಎಸಿಪಿ ಕೃಷ್ಣಮೂರ್ತಿ ಅವರು ಅನುಮತಿ ನೀಡಲು 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಹೋಟೆಲ್ ವ್ಯವಸ್ಥಾಪಕ ಸಂಜಯ್ ಕುಮಾರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

- Advertisement - 

ಅದರನ್ವಯ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಕಚೇರಿಯಲ್ಲಿ 30 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಪಿ ಕೃಷ್ಣಮೂರ್ತಿ ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

 

Share This Article
error: Content is protected !!
";