ರಾಷ್ಟ್ರೀಯ ಯುವ ಪ್ರಶಸ್ತಿ ಸ್ವೀಕರಿಸಿದ ಕೋಡಿಹಳ್ಳಿ ಟಿ. ಶಿವಮೂರ್ತಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ರಾಯಚೂರು ಜಿಲ್ಲೆಯಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ವತಿಯಿಂದ ರಾಯಚೂರಿನ ಪಂಡಿತ್ ಸಿದ್ಧರಾಮ ಜಂಬಲ ದಿನ್ನಿ ರಂಗ ಮಂದಿರದಲ್ಲಿ 11 ನೇಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಇವರ ಅನೇಕ ಸಾಮಾಜಿಕ ಸಂಘ ಸಂಸ್ಥೆಗಳ ಕಾರ್ಯಗಳು ಹಾಗೂ ಸಾಹಿತ್ಯದ ಚಟುವಟಿಕೆಗಳು ಅಲ್ಲದೇ ಇವರು ವಿವಿಧ ಕ್ಷೇತ್ರಗಳಲ್ಲಿ ಇವರ ಕಾರ್ಯಗಳು, ಯುವ ಬರಹ, ಜಾನಪದ ಕಲಾವಿದರು ಹಾಗೂ ಸಾಹಿತ್ಯ ವೇದಿಕೆಗಳಲ್ಲಿ ಸಲ್ಲಿಸಿರುವ ಸಾಮಾಜಿಕ ಕನ್ನಡ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಕೋಡಿಹಳ್ಳಿ ಟಿ ಶಿವಮೂರ್ತಿ ರವರಿಗೆ ” ರಾಷ್ಟ್ರೀಯ ಯುವ ಪ್ರಶಸ್ತಿ ” ನೀಡಿ ಗೌರವಿಸಲಾಯಿತು.

- Advertisement - 

 ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷರಾದ ಡಾ.ಅರ್ಜುನ್ ಗೊಳಸಂಗಿ, ಈ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿಕೊಂಡ  ಡಾ.ಜಯದೇವಿ ಗಾಯಕವಾಡ,ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ತಾಯರಾಜ್  ಮರ್ಚಟಳ ಹಾಗೂ

ಬೆಂಗಳೂರು ದಲಿತ ಸಾಹಿತ್ಯ ಪರಿಷತ್ ವಿಭಾಗೀಯ ಸಂಯೋಜಕರಾದ ಶ್ರೀ ಗಣಪತಿ ಗೋ ಛಲವಾದಿ, ಇನ್ನೂ ಅನೇಕ ಕವಿಗಳು, ಹಿರಿಯ ಸಾಹಿತಿಗಳು, ಗಣ್ಯಾತಿ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಅಲ್ಲದೆ ಈ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚು ಜನ ಕವಿಗಳು, ಸಾಹಿತ್ಯಾಸಕ್ತರು,ಕಲಾವಿದರು, ಲೇಖಕರು, ಯುವ ಬರಹಗಾರರು,ದಲಿತ ಚಳುವಳಿ ಹೋರಾಟಗಾರರು, ಪ್ರಗತಿಪರ ಸಾಮಾಜಿಕ ಚಿಂತಕರು,ಪತ್ರಕರ್ತರು ಭಾಗವಹಿಸಿದ್ದು ವಿಶೇಷವಾಗಿತ್ತು.

- Advertisement - 

ಇವರ ಸೇವೆಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ಮತ್ತು ಪ್ರಶಸ್ತಿಗಳು ದೊರೆಯಲಿ ಎಂದು ಚಿತ್ರದುರ್ಗ ಜಿಲ್ಲೆಯ ಇವರ ಸ್ನೇಹಿತರು ಹಿತೈಷಿಗಳು ಕವಿಗಳು,ಸಾಹಿತಿಗಳು ಶುಭ ಹಾರೈಸಿದ್ದಾರೆ.

 

Share This Article
error: Content is protected !!
";