ಚಂದ್ರವಳ್ಳಿ ನ್ಯೂಸ್, ಮೊಳಕಾಲ್ಮೂರು:
ಇಂಡಿಯನ್ ರಾಯಲ್ ಅಕಾಡೆಮಿ ಆಫ್ ಆರ್ಟ್ ಆಂಡ್ ಕಲ್ಚರ್ ಸಂಸ್ಥೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ/ ರೇಖಾಚಿತ್ರ ಸ್ಪರ್ಧೆಯಲ್ಲಿ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಜಬೀವುಲ್ಲಾ ಎಂ. ಅಸದ್ ಅವರ ಕಲಾಕೃತಿಗಳು “ರಾಯಲ್ ಚಿನ್ನದ ಪದಕ” ಕ್ಕೆ ಪಾತ್ರವಾಗಿದ್ದು.

ಇದೇ ತಿಂಗಳ 28ರ ಭಾನುವಾರದಂದು ಕಲ್ಬುರ್ಗಿಯ ಕನ್ನಡ ಭವನದಲ್ಲಿರುವ ಕಲಾ ಸೌಧ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳ ಪ್ರದರ್ಶನದೊಂದಿಗೆ ಪದಕ ಪ್ರಧಾನ ಮಾಡಲಾಗುವುದು.

