ಶಾಸಕ-ನಗರಸಭೆ ಅಧ್ಯಕ್ಷರ ಮಧ್ಯ ತೀವ್ರ ಮಾತಿನ ಚಕಮಕಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ರಾಮನಗರ:
ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಅವರ ಎದುರೇ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಹಾಗೂ ನಗರಸಭೆ ಅಧ್ಯಕ್ಷರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ನೋಡಿಗರಿಗೆ ಮುಜುಗರ ತಂದಿತು.

ರಾಮನಗರಕ್ಕೆ ರೈಲ್ವೆ ಕಾಮಗಾರಿಗಳ ವೀಕ್ಷಣೆಗೆ ಆಗಮಿಸಿದ್ದ ಸಚಿವ ವಿ. ಸೋಮಣ್ಣ ಅವರ ಎದುರಲ್ಲೇ, ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹಾಗೂ ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ನಡುವೆ ಮಾತಿನ ಜಟಾಪಟಿ ಆರಂಭವಾಯಿತು.

- Advertisement - 

ಕೆಲಕಾಲ ಇಬ್ಬರ ನಡುವಿನ ವಾಗ್ವಾದ ತೀವ್ರಗೊಂಡಿತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಾಣುತ್ತಿದ್ದಂತೆಯೇ ಸಚಿವ ವಿ. ಸೋಮಣ್ಣ ಮಧ್ಯ ಪ್ರವೇಶಿಸಿ ನಗರಸಭೆ ಅಧ್ಯಕ್ಷರನ್ನು ಸಮಾಧಾನಪಡಿಸಿದ ಪ್ರಸಂಗವೂ ಜರುಗಿತು.

 

- Advertisement - 

 

Share This Article
error: Content is protected !!
";