ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚಿತ್ರದುರ್ಗ ಜಿಲ್ಲೆ ಹಿರಿಯೂರು ಘಟಕದ ಅಧ್ಯಕ್ಷರನ್ನಾಗಿ “ಹನುಮಂತರೆಡ್ಡಿ ಮತ್ತು ರಾಜ್ಯ ಸಹ ಕಾರ್ಯದರ್ಶಿಯಾಗಿ ಮಧುಸೂದನ್ ಅವರು ಆಯ್ಕೆಯಾಗಿದ್ದಾರೆ.
ಹನುಮಂತರೆಡ್ಡಿ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಿದ ತಾಲೂಕಿನ ಎಲ್ಲಾ ಶಿಕ್ಷಕರಿಗೆ, ಸಂಘದ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು, ನಾಮ ನಿರ್ದೇಶಕರಿಗೆ ಹನುಮಂತರೆಡ್ಡಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಸಂಘದಿಂದ ಅನುಮೋದಿಸಿ ಆದೇಶ ಪತ್ರ ನೀಡಿ ರಾಜ್ಯ ಅಧ್ಯಕ್ಷರ ತಮ್ಮ ಸಮ್ಮುಖದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.
ಈ ಸವಿ ನೆನಪಿಗೆ ಸಾಕ್ಷಿಯಾದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ್ ನುಗ್ಲಿ ಅವರು, ಪ್ರಧಾನ ಕಾರ್ಯದರ್ಶಿ ಕೊಡಗಿನ ಚೇತನ್, ರಾಜ್ಯ ಉಪಾಧ್ಯಕ್ಷ ಮಾರುತೇಶ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಹಾಂತೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಉಪಾಧ್ಯಕ್ಷ ರಮೇಶ್ ನಾಯಕ್, ಸಹ ಕಾರ್ಯದರ್ಶಿ ಶಿವಮೂರ್ತಿ, ಹಿರಿಯೂರು ತಾಲೂಕು ಅಧ್ಯಕ್ಷೆ ಲೋಕಮ್ಮ, ಉಪಾಧ್ಯಕ್ಷೆ ಸವಿತಾ, ಪ್ರಧಾನ ಕಾರ್ಯದರ್ಶಿ ಮಹಾಸ್ವಾಮಿ ಮತ್ತಿತರರು ಇದ್ದರು.

