ರಂಗನಹಳ್ಳಿ ಆರ್.ಕೆ ಹಾಲಪ್ಪ ಇನ್ನಿಲ್ಲ, ಭಾನುವಾರ ಸ್ವಗ್ರಾಮದಲ್ಲಿ ಅಂತ್ಯ ಕ್ರಿಯೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಕುಂಚಿಟಿಗ ಸಮಾಜ ಹಿರಿಯ ಮುಖಂಡರಾದ ರಂಗನಹಳ್ಳಿ
ಆರ್.ಕೆ. ಹಾಲಪ್ಪ(74) ಅವರು ದಿನಾಂಕ 25.12.2025 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಭಾನುವಾರ ಬೆಳಿಗ್ಗೆ 8.30ರ ತನಕ ಅಂತಿಮ ದರ್ಶನಕ್ಕೆ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಅವರ ಮನೆಯ ಮುಂದೆ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಗುವುದು.
ನಂತರ ಸ್ವಂತ ಊರಾದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ರಂಗನಹಳ್ಳಿಗೆ ಕೊಂಡೊಯ್ಯಲಾಗುವುದು.
ಊರಿನಲ್ಲಿ ಅಂದೇ 11 ಗಂಟೆಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಪುತ್ರನನ್ನು ಅಗಲಿದ್ದಾರೆ.

