ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನವವಿವಾಹಿತೆ ಗಾನವಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

ಗಾನವಿ ಪತಿ ಸೂರಜ್ ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗಿದ್ದರೆ ಗಾನವಿ ಅತ್ತೆ ಜಯಂತಿ ಕೂಡ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದಾರೆ.

- Advertisement - 

ಗಾನವಿ ಆತ್ಮಹತ್ಯೆಯ ಬಳಿಕ ಪತಿ ಸೂರಜ್‌, ಅತ್ತೆ ಜಯಂತಿ, ಸೂರಜ್‌ಸಹೋದರ ಸಂಜಯ್‌ಮಹಾರಾಷ್ಟ್ರದ ನಾಗ್ಪುರಕ್ಕೆ ತೆರಳಿದ್ದರು.

ಶುಕ್ರವಾರ ಸಂಜೆ ಅತ್ತೆ ಜಯಂತಿ, ಪತಿ ಸೂರಜ್ ಸೋನೆಗಾಂವ್‌ನಲ್ಲಿರುವ ರಾಯಲ್‌ವಿಲ್ಲಾ ಹೋಟೆಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸೂರಜ್‌ಮೃತಪಟ್ಟಿದ್ದರೆ, ಜಯಂತಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

- Advertisement - 

ಆತ್ಮಹತ್ಯೆ ಏನು ಕಾರಣ-
ಮೃತ ಗಾನವಿ ಮತ್ತು ಪತಿ ಸೂರಜ್ ಇಬ್ಬರು ಹನಿಮೂನ್​​ಗಾಗಿ ಶ್ರೀಲಂಕಾಕ್ಕೆ ಹೋಗಿದ್ದರು. ಈ ವೇಳೆ ಸೂರಜ್ ತನ್ನ ಹೆಂಡ್ತಿಯನ್ನು ಮುಟ್ಟೇ ಇಲ್ಲ, ಸೂರಜ್ ನಪುಂಸಕ
, ಗಂಡಸೇ ಅಲ್ಲ. ಅಂತೆಲ್ಲಾ ಮೃತ ಗಾನವಿ ಕುಟುಂಬಸ್ಥರು ಆರೋಪಿಸಿದ್ದರು.

ಅಲ್ಲದೇ ಪತಿ ಸೂರಜ್ ಮನೆ ಮುಂದೆ ಗಾನವಿಯ ಶವವಿಟ್ಟು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

 

 

Share This Article
error: Content is protected !!
";