ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಫಾಕ್ಸ್’ಕಾನ್ ಯಶಸ್ಸಿಗೆ ರಾಜ್ಯ ಸರ್ಕಾರವೇ ಕಾರಣ! ಆಗಿದೆ ಎಂದು ರಾಜ್ಯ ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಹೇಳಿದರು.
ಫಾಕ್ಸ್’ಕಾನ್ ಅಧ್ಯಕ್ಷರು ಮುಖ್ಯಮಂತ್ರಿಗಳೊಂದಿಗೆ ಮಾತುಕತೆಯ ಮೂಲಕ ಕಂಪೆನಿಯನ್ನು ರಾಜ್ಯಕ್ಕೆ ಕರೆತಂದು 300ಎಕರೆ ಭೂಮಿ ನೀಡಿದ್ದೇವೆ.
ಉತ್ತೇಜನ- ಸೇರಿದಂತೆ ಅನೇಕ ಸೌಲಭ್ಯಗಳನ್ನು ಕೊಟ್ಟ ಪರಿಣಾಮ ಫಾಕ್ಸ್’ಕಾನ್ ಯಶಸ್ವಿಯಾಗಿ ಮುನ್ನಡೆಯಲು ಕಾರಣವಾಗಿದೆ ಎಂದು ಪಾಟೀಲ್ ತಿಳಿಸಿದರು.
ಇದು ನಾನು, ಸಿಎಂ, ಐಟಿ ಸಚಿವರು ಸೇರಿದಂತೆ ನಮ್ಮಸರ್ಕಾರದ ಸಾಧನೆ. ಆದರೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಮ್ಮ ರಾಜ್ಯಕ್ಕೆ ಒಂದಾದರು ಸೆಮಿಕಂಡಕ್ಟರ್ ಸಂಸ್ಥೆ ಕೊಟ್ಟು ಅದರ ಕ್ರೆಡಿಟ್ ತೆಗೆದುಕೊಳ್ಳಲಿ ಬೇಡವೆಂದವರು ಯಾರು?! ಎಂದು ಸಚಿವ ಎಂ.ಬಿ ಪಾಟೀಲ್ ಟಾಂಗ್ ನೀಡಿದ್ದಾರೆ.

