ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಹೆಚ್ಚು ಆದ್ಯತೆ ನೀಡುತ್ತಾ ಬಂದಿದೆ. ಎಸ್‌ಎಸ್‌ಎಲ್‌ಸಿ ನಂತರ ಪದವಿಪೂರ್ವ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಆದರೂ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಬಾರದಿರುವುದು ಬೇಸರ ಸಂಗತಿ. ಮುಂಬರುವ ಪರೀಕ್ಷೆಯಲ್ಲಿ ೧೩೦ ಪದವಿಪೂರ್ವ ಕಾಲೇಜುಗಳಲ್ಲಿ ನಮ್ಮ ಕಾಲೇಜು ಫಲಿತಾಂಶ ಪ್ರಥಮ ಸ್ಥಾನದಲ್ಲಿ ಇರಬೇಕು ಎಂದು ಕ್ಷೇತ್ರದ ಶಾಸಕರು ಹಾಗೂ ಸಣ್ಣ ಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷರು ಮತ್ತು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೋವರ್‍ಸ್ ಅಂಡ್ ರೇಂಜರ್‍ಸ್ ಘಟಕಗಳ ಸಮಾರೋಪಸಮಾರಂಭ ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಳೆದ ಸುಮಾರು ಹತ್ತಾರು ವರ್ಷಗಳಿಂದ ಸಕ್ರಿಯವಾಗಿ ಕಾಲೇಜಿನ ಅಭಿವೃದ್ದಿಯ ಬಗ್ಗೆ ಹೆಚ್ಚು ಅನುದಾನ ನೀಡಿದ್ದೇನೆ. ಪ್ರತಿವರ್ಷವೂ ಫಲಿತಾಂಶದಲ್ಲಿ ಹಿನ್ನೆಡೆ ಅನುಭವಿಸುತ್ತಿರುವುದು ನೋವಿನಸಂಗತಿಯಾಗಿದೆ.
ಇತ್ತೀಚಿನಗೆ ಬಂದ ಫಲಿತಾಂಶವೂ ಇನ್ನೂ ಹೆಚ್ಚು ಆಗಂತಕಾರಿಯಾಗಿದೆ. ಆದ್ದರಿಂದ ಪ್ರಾಂಶುಪಾಲರು ಸೇರಿದಂತೆ ಎಲ್ಲರೂ ಫಲಿತಾಂಶವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಪಿಯುಡಿಡಿಪಿಐ ಕೆ.ತಿಮ್ಮಯ್ಯ, ಪ್ರಸ್ತುತ ೧೩೦ ಸರ್ಕಾರಿ ಪದವಿ ಪೂರ್ವ ಕಾಲೇಜಿಗಳಿದ್ದು, ಈ ಕಾಲೇಜು ಸಹ ಫಲಿತಾಂಶ ೧೨೬ನೇ ಸ್ಥಾನ ಪಡೆದಿದೆ.
ಫಲಿತಾಂಶದ ನಂತರ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರು ಸೇರಿದಂತೆ ಎಲ್ಲಾ ಉಪನ್ಯಾಸಕರಿಗೆ ನಿರ್ದೇಶನ ನೀಡಿದ್ದು, ಈ ಬಾರಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗುವುದು ಎಂದರು.
ಸಮಾರೋಪಭಾಷಣ ಮಾಡಿದ ಮೊಳಕಾಲ್ಮೂರು ಕಾಲೇಜು ಪ್ರಾಂಶುಪಾಲ ಬಿ.ಗೋವಿಂದಪ್ಪ, ಪ್ರತಿವರ್ಷವೂ ಕಾಲೇಜಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಹೆಚ್ಚುಆಸಕ್ತಿ ಕಾಣುತ್ತಿದೆ. ಅದೇ ರೀತಿ ಫಲಿತಾಂಶ ಪಡೆಯುವನಿಟ್ಟಿನಲ್ಲೂ
ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಕೆ.ಎಚ್.ರಾಜು, ಕಾಲೇಜಿನ ಎಲ್ಲಾ ವಿಭಾಗಗಳಲ್ಲೂ ಸಹ ಉಪನ್ಯಾಸಕರು ಪರಿಣಾಮಕಾರಿಯಾಗಿ ಬೋಧನೆಯಲ್ಲಿ ತೊಡಗಿದ್ದಾರೆ.
೭೩ ವಿದ್ಯಾರ್ಥಿಗಳು ಕಾಲೇಜಿಗೆ ಗೈರಾಗಿದ್ದು ಅವರನ್ನು ಸಹ ಆಹ್ವಾನಿಸಿ ವಿಶೇಷ ತರಗತಿಗಳನ್ನು ನಡೆಸಲಾಗುವುದು. ಫಲಿತಾಂಶವನ್ನು ಉತ್ತಮಪಡಿಸುವನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದೆ ಎಂದರು.
ರಂಗಭೂಮಿ ಕಲಾವಿದ ನನ್ನಿವಾಳ ಹನುಮಂತಪ್ಪ ಪೂಜಾರ್, ಹೆಚ್ಚು ಅಂಕ ಪಡೆದ ಮತ್ತು ವಿವಿಧ ಕ್ರೀಡೆ, ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾರಂಟಿಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಟಿ.ವೀರೇಶ್, ನಿರ್ದೇಶಕ ಎಂ.ಶ್ರೀನಿವಾಸ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಟಿ.ರುದ್ರಮುನಿ, ಶಲ್ಯ ದ್ಯಾಮಣ್ಣ, ಗುರುನಾಥಗುಪ್ತ, ಈ.ಮಂಜುನಾಥ, ಕುಮಾರಸ್ವಾಮಿ, ಎನ್‌ಎಸ್‌ಎಸ್ ಅಧಿಕಾರಿ ಬಿ.ಶಾಂತಕುಮಾರಿ, ಉಪನ್ಯಾಸಕರಾದ ಬೆಳಗಟ್ಟ ನಾಗರಾಜು, ಜಬೀವುಲ್ಲಾ, ಪಿ.ಕೆ.ಮಂಜುನಾಥ, ಸಯೀದಬೇಗಂ, ಟಿ.ಈಶ್ವರಪ್ಪ, ನಿವೃತ್ತ ಪ್ರಾಂಶುಪಾಲ ಎಸ್.ಲಕ್ಷ್ಮಣ್ ಮುಂತಾದವರು ಭಾಗವಹಿಸಿದ್ದರು.

