ಡಿ.30ರಂದು ತಿಪ್ಪಜ್ಜಿ ಸರ್ಕಲ್‌ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕೆಳಗೋಟೆ ತಿಪ್ಪಜ್ಜಿ ಸರ್ಕಲ್‌ನಲ್ಲಿರುವ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ೨೩ ನೇ ವರ್ಷದ ವೈಕುಂಠ ಏಕಾದಶಿ ಪ್ರಯುಕ್ತ ಡಿ.೩೦ ರಂದು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.

ಬೆಳಿಗ್ಗೆ ೬ ಗಂಟೆಯಿಂದ ಸ್ವಾಮಿಯ ಪ್ರಾಕಾರೋತ್ಸವ, ಉತ್ತರ ಬಾಗಿಲು ಪೂಜೆ, ಅಲಂಕಾರ ಸೇವೆ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೈಕುಂಠ ದ್ವಾರದ ಮೂಲಕ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯುವಂತೆ ತಿಮ್ಮಪ್ಪ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ಡಿ.ತಿಮ್ಮಣ್ಣ ಮನವಿ ಮಾಡಿದ್ದಾರೆ.

- Advertisement - 

Share This Article
error: Content is protected !!
";