ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 26ನೇ ವರ್ಷದ ಮಹಾ ಅನ್ನಪ್ರಸಾದ ಕಾರ್ಯಕ್ರಮವನ್ನು ಭಾನುವಾರ ವರ್ತಕ ಉದಯ್ ಶೆಟ್ಟಿ ಹಾಗೂ ಕರ್ನಾಟಕ ಅಯ್ಯಪ್ಪ ಸ್ವಾಮಿ ಅನ್ನ ಪ್ರಸಾದದ ಅಧ್ಯಕ್ಷ ಶರಣ್ ಕುಮಾರ್ ಅವರು ಜ್ಯೋತಿ ಬೆಳಗುವ ಮುಖಾಂತರ ಅನ್ನ ಪ್ರಸಾದದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸೋಮಶೇಖರ್, ಬಾಬು, ಬಂಗೇರ, ದೇವಸ್ಥಾನದ ಪ್ರಧಾನ ಅರ್ಚಕರ ರಘು ಸ್ವಾಮಿ, ಕಾರ್ಯದರ್ಶಿ ಎಂ. ಪಿ ವೆಂಕಟೇಶ್, ಉಪಾಧ್ಯಕ್ಷ ಮಲ್ಲಿಕಾರ್ಜುನ್,
ದೇವಸ್ಥಾನದ ಪದಾಧಿಕಾರಿಗಳಾದ ವಿ ಜಿ ಮೋಹನ್, ಸೂರಪ್ಪ, ಇಂದ್ರಣ್ಣ, ಅಪ್ಪಾಜಿ, ತಿಮ್ಮಣ್ಣ, ಚಂದ್ರಶೇಖರ್, ರೇಷ್ಮೆ ಮಂಜುನಾಥ್, ಭೋವಿ ವೆಂಕಟೇಶ್, ಜಗದೀಶ, ಮೋಹನ್ ಸ್ವಾಮಿ, ಹಾಗೂ ಗುರುಸ್ವಾಮಿ ರಮೇಶ್ ಉಪಸ್ಥಿತರಿದ್ದರು.
ಅಂದಾಜು 7 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.

