ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಮಿಳುನಾಡಿನ ಕುಂಚಿಟಿಗ ನೌಕರರಿಗೆ ಡಿಸೆಂಬರ್-30 ರಂದು ಮಂಗಳವಾರ ಬೆಳಿಗ್ಗೆ 11ಗಂಟೆಗೆ ತಾಲೂಕಿನ ಚಿಲ್ಲಹಳ್ಳಿ ಗ್ರಾಮದಲ್ಲಿ ಸನ್ಮಾನ ಏರ್ಪಡಿಸಲಾಗಿದೆ.
ಚಿಲ್ಲಹಳ್ಳಿಯಲ್ಲಿರುವ ಕುಂಚಿಟಿಗರ ಎರಡು ಕೆರೆ ಕುಲದ ಮನೆ ದೇವರಾದ ಶ್ರೀ ಕಾಟ ಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಾಲ್ಲೂಕು ಕುಂಚಿಟಿಗರ ಸಂಘದವರು ಹಾಜರಿದ್ದು ತಮಿಳುನಾಡಿನಿಂದ ಆಗಮಿಸುವವರಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಪ್ಪನಹಳ್ಳಿ ಎಂ.ಆರ್.ರುದ್ರಯ್ಯ ಅವರ ಪುತ್ರ ಎಂ.ಆರ್.ಜೋಗೇಶ್ ರವರು ತಮಿಳುನಾಡಿನ ಎಲ್ಲಾ ಕುಲ ಭಾಂಧವರಿಗೆ ನೆನಪಿನ ಕಾಣಿಕೆ ನೀಡಲಿದ್ದಾರೆ.
ನಂತರ ಮರ್ಧಾಹ್ನ 3ಗಂಟೆಗೆ ಸಮುದ್ರದ ಹಳ್ಳಿಯ ಶ್ರೀ ಲಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ಸಂಜೆ 5 ಗಂಟೆಗೆ ಮಾರಿ ಕಣಿಮೆ ಶ್ರೀ ಕಣಿಮೆ ಮಾರಮ್ಮನ ದೇವಸ್ಥಾನಕ್ಕೆ ಭೇಟಿ ನೀಡಿ ಸಂಜೆ ಬೆಂಗಳೂರಿಗೆ ಪ್ರಯಾಣ ಮಾಡುವರು ಎಂದು ಹಿರಿಯೂರು ತಾಲೂಕು ಕುಂಚಿಟಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಹನುಮಂತರಾಯ ತಿಳಿಸಿದ್ದಾರೆ.

