ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ನಡೆಸಿಕೊಡುವ ‘ಮನ್ ಕಿ ಬಾತ್‘ ಕಾರ್ಯಕ್ರಮವನ್ನು ಭಾನುವಾರ ಕಾರ್ಕಳದ ಲಯನ್ಸ್ ಶಾಲೆಯಲ್ಲಿ ವಿದ್ಯಾರ್ಥಿಗಳು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ವೀಕ್ಷಿಸಲಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.
2025ರ ಈ ವರ್ಷದಲ್ಲಿ ಭಾರತ ಸಾಧನೆಯ ಮೈಲಿಗಲ್ಲುಗಳನ್ನು, ರಾಷ್ಟ್ರೀಯ ಭದ್ರತೆ, ಕ್ರೀಡೆ, ವೈಜ್ಞಾನಿಕ ಸಂಶೋಧನೆಗಳು ಮತ್ತು ವಿಶ್ವದ ಅತಿದೊಡ್ಡ ವೇದಿಕೆಗಳಲ್ಲಿ, ದೇಶದ ಉಜ್ವಲ ಜಾಗತಿಕ ಪ್ರಭಾವದ ಬಗ್ಗೆ ಹೆಮ್ಮೆಯ ಪ್ರಧಾನಿಗಳ ಮಾತುಗಳ ಈ ಕಂತು, ಎಂದಿನಂತೆಯೇ ಹೃದಯಸ್ಪರ್ಶಿಯಾಗಿತ್ತು, ಮನನೀಯವಾಗಿತ್ತು!
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಕಾರ್ಕಾಳ ಸುನೀಲ್, ಕುಂದಾಪರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರ ನವೀನ್ ಶೆಟ್ಟಿ, ಕಾರ್ಕಳ ಮಂಡಲಅಧ್ಯಕ್ಷ ನವೀನ್ ನಾಯಕ್ ಸೇರಿದಂತೆ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

