ಸಾಧಕ ಶರಣಬಸವ ಅವರಿಗೆ ಚಿತ್ರಸಂತೆ ‘ರಾಜ್ಯೋತ್ಸವ ಪುರಸ್ಕಾರ’ ಪ್ರದಾನ

News Desk
- Advertisement -  - Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ಚಿತ್ರಸಂತೆ ಸಂಸ್ಥೆ ವತಿಯಿಂದ  ಆಯೋಜಿಸಿದ್ದ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರು, ರಾಜ್ಯೋತ್ಸವ ಪುರಸ್ಕಾರ 2025 ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದುಗುಪ್ಪ ಗ್ರಾಮದ ನಿವಾಸಿ ಪ್ರಸ್ತುತ ವಿಸಿಎನ್ ಟಿವಿಯ ವ್ಯವಸ್ಥಾಪಕರು ಮತ್ತು ಸಮಾಜ ಸೇವಕರಾದ ಇವರು ಕಳೆದ ಹತ್ತು ದಶಕದಿಂದಲೂ ತಮ್ಮ ತನ ಮನ ದನ ಮೂಲಕ  ಕಾರಟಗಿ-ಸಿಂಧನೂರು ಸೇರಿದಂತೆ ಇನ್ನಿತರ ನಾನಾ ತಾಲೂಕುಗಳಲ್ಲಿ, ಗ್ರಾಮಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ (ಮಾಧ್ಯಮ, ಶಿಕ್ಷಣ, ಸಮಾಜ ಸೇವೆ) ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿದ ಚಿತ್ರಸಂತೆ ಸಂಸ್ಥೆಯ 2025 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ರಾಜ್ಯೋತ್ಸವ ಪುರಸ್ಕಾರಪ್ರಶಸ್ತಿಯನ್ನು ಬಿ. ಶರಣಬಸವ ಅವರಿಗೆ ಪ್ರದಾನ ಮಾಡಲಾಯಿತು.

- Advertisement - 

ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷ ಗಿರೀಶ್ ಗೌಡ್ರು ಮಾತನಾಡಿ ನಮ್ಮ ಸಮಾಜದಲ್ಲಿ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಬಿ. ಶರಣಬಸವ ಅವರನ್ನು ಗೌರವಿಸುವ ಭಾಗ್ಯ ನಮಗೆ ಸಿಕ್ಕಿದೆ. ವ್ಯಕ್ತಿತ್ವವು ಕೇವಲ ಅಧಿಕಾರದಿಂದ ದೊಡ್ಡದಾಗುವುದಿಲ್ಲ, ಅವರು ಮಾಡುವ ಕೆಲಸ ಹಾಗೂ ಸಮಾಜದ ಮೇಲಿನ ಕಾಳಜಿಯಿಂದ ದೊಡ್ಡದಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಇವರು ಕಳೆದ 9-10 ವರ್ಷಗಳಿಂದ ಸಮಾಜ ಸೇವೆ ಮತ್ತು ಹೋರಾಟ, ವಿಸಿಎನ್ ಟಿವಿ ಸೇರಿದಂತೆ ರಾಜ್ಯದ ನಾನಾ ಮಾಧ್ಯಮಗಳ ಕ್ಷೇತ್ರದಲ್ಲಿ ಮಾಡಿದ ಸಾಧನೆ ನಿಜಕ್ಕೂ ಮೆಚ್ಚುವಂತದ್ದು. ಕಷ್ಟದ ಸಮಯದಲ್ಲಿಯೂ ದೃತಿಗೆಡದೆ ಅವರು ತೋರಿದ ಹಾದಿ ನಮ್ಮಂತಹ ಅನೇಕರಿಗೆ ಸ್ಫೂರ್ತಿ ಎಂದರು.

ಸನ್ಮಾನಿತರಾದ ಬಿ. ಶರಣಬಸವ ಮಾತಾನಾಡಿ, ತಮ್ಮ ಮಾತಿನ ಮೂಲಕ ಸನ್ಮಾನ ಎಂದರೆ ಕೇವಲ ಶಾಲು ಹೊದಿಸಿ ಹಾರ ಹಾಕಿ ಗೌರವಿಸುವುದಲ್ಲ. ಇದೊಂದು ಸಾಧನೆಗೈದವರ ನಿಸ್ವಾರ್ಥ ಸೇವೆಗೆ ನಾವು ಸಲ್ಲಿಸುತ್ತಿರುವ ಸಣ್ಣ ಕೃತಜ್ಞತೆ. ಇಂತಹ ಸಾಧಕರನ್ನು ಗೌರವಿಸುವುದರ ಮೂಲಕ ನಾವೆಲ್ಲರೂ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಪಡೆಯುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಬಿಗ್‌ಬಾಸ್‌ಸೀಸನ್‌
10ರ ವಿಜೇತ ಕಾರ್ತಿಕ್ ಮಹೇಶ್, ಚಿತ್ರರಂಗದ ನಾನಾ ತಾರೆಯರು ಹಾಗೂ ನಾಡಿನ ಸಾಧಕರು, ಸಂಶೋಧಕರು ಹಾಗೂ ಪತ್ರಕರ್ತರು ಈಶ್ವರ್ ಸಿರಿಗೇರಿ, ಗಣ್ಯರು ಪಾಲ್ಗೊಂಡು ಸನ್ಮಾನಿಸಿದರು. ಪುಸ್ತಕ ಸಹ ಬಿಡುಗಡೆ ಮಾಡಲಾಯಿತು. ಚಿತ್ರಸಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

- Advertisement - 

Share This Article
error: Content is protected !!
";