ಭಗವತಿ ಹೇಮಾವತಿ!

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಗವತಿ ಹೇಮಾವತಿ!
ಸಂಸಾರ ಜೀವನವನ್ನು ಕುವೆಂಪು ಯೋಗವೆಂದು ತಿಳಿದವರು. ಅವರ ಸಾಧನೆಗೆ  ಪತ್ನಿ ಹೇಮಾವತಿಯವರು ಹಿನ್ನೆಲೆಯಾದರು. ಅವರ ಸಾವಿನಲ್ಲಿ ಕುವೆಂಪು ತಮ್ಮ ಸೃಜನಶೀಲ ಶಕ್ತಿಯನ್ನೇ ಕಳೆದುಕೊಂಡಂತೆ ಅಚೇತನರಾದರು!
ಅವರ ಪಾಲಿಗೆ ಹೇಮಾವತಿ ಭಗವತಿಯೇ ಆಗಿದ್ದರು!

೧೯೮೨ ರ ಸೆಪ್ಟೆಂಬರ್ ಹದಿನೈದರಂದು ಕುವೆಂಪು ಅವರು ಮಡದಿ  ಹೇಮಾವತಿಯವರ ಶವಶ್ರೀಯ ಪಾದದ ಬಳಿಯಲ್ಲಿ ಕುಳಿತು,

- Advertisement - 

ಸರ್ವ ಮಾಂಗಲ್ಯೇ ಶಿವೆ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೆ…” ಎಂದು ಸ್ತುತಿಸುತ್ತ, ಅವರ ಪಾದದ ಮೇಲೆ ತಮ್ಮ ಹಣೆಯನ್ನಿಟ್ಟುಕೊಂಡು ಮೌನವಾಗಿ ರೋಧಿಸಿದರು!.

ಹಕ್ಕಿರದ ಉಸಿರಿಗೆ ಹಕ್ಕಾದವಳು
ದಿಕ್ಕಿರದ ಉಸಿರಿಗೆ ದಿಕ್ಕಾದವಳು
ಮನೆ ಬಿಟ್ಟವನಿಗೆ ಮನೆಯಾದವಳು
ಕಗೆಟ್ಟವನಿಗೆ ಕಣ್ಣಾದವಳು
ಒಲುಮೆಯ ಹೆಣ್ಣು
ಅಮೃತದ ಹಣ್ಣು”.

- Advertisement - 

(ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶಾರದಾದೇವಿಯರು ಕುವೆಂಪುರವರ ಆದರ್ಶವೇ ಆಗಿದ್ದರಲ್ಲ).
ಸೃಜನಶೀಲ ಕುವೆಂಪುರವರನ್ನಷ್ಟೇ ಅವಲೋಕಿಸುವ ಚಿಂತಕರು ಕುವೆಂಪುರವರ ನಿರ್ಮಲ ಸತೀ ಪ್ರೇಮವನ್ನೂ ಗಮನಿಸಬಹುದು!.

ಮನದನ್ನೆ ಹೇಮಾವತಿ  ತೀರಿಕೊಂಡ ಬಳಿಕ ಕುವೆಂಪು ಕ್ರಮೇಣ ಅಂತರ್ಮುಖಿಯಾದರು! ನಂತರ ಆಕೆಯ ನೆನಪಲ್ಲೇ ತಮ್ಮ ಜೀವನವನ್ನು ಕಳೆದರಂತೆ! ಮುಂದಿನ ದಿನಗಳಲ್ಲಿ ಕುವೆಂಪು ಅವರಿಗೆ ಒಂದೇ ಒಂದು ಸಾಲನ್ನು  ಬರೆಯಲಾಗಲಿಲ್ಲವಂತೆ! ಕುವೆಂಪು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೃಶರಾದರು!.
ಕಿರು ಮಾಹಿತಿ ಲೇಖನ:ಸಿ ಬಿ ಶೈಲಾ ಜಯಕುಮಾರ್, ಚಿತ್ರದುರ್ಗ.

Share This Article
error: Content is protected !!
";