ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ.ಎಂ.ವೇದಾಂತ್ ಏಳಂಜಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಆಶುಕವನಗಳಲ್ಲಿ ತತ್ ಕ್ಷಣಕ್ಕೆ ಹೊಳೆದದ್ದನ್ನು ಅಭಿವ್ಯಕ್ತಿಸುವ ಕಲೆ ವಿರಳವಾಗಿರುತ್ತವೆ ಎಂದು ವಿಮರ್ಶಕರು
, ಪುಸ್ತಕ ಪಾಧಿಕಾರದ  ಜಿಲ್ಲಾ ಜಾಗೃತಿ ಸಮಿತಿ ಸದಸ್ಯರು ಹಾಗೂ ಉಪನ್ಯಾಸಕ ಡಾ.ಎಂ.ವೇದಾಂತ ಏಳಂಜಿ ತಿಳಿಸಿದರು.
ಅವರು ಆಶುಕವನ ಸಂಕಲನ ಪತಂಗ ಕೃತಿ ಕುರಿತು ಮಾತನಾಡಿದರು. 

ಅಂತಹ ವಿರಳ ಪ್ರತಿಭೆಯು ಕವಿ ತಿಪ್ಪೇಸ್ವಾಮಿ ಬಿ.ಜಿ. ಯವರಾಗಿದ್ದು ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಹೇಳುತ್ತಿವೆ. ಪ್ರೀತಿ ಪ್ರೇಮ, ವಿಜ್ಞಾನ, ಪ್ರಾಣಿ ಪಕ್ಷಿ, ಸಂಭ್ರಮ, ಯುಗಾದಿ, ಹೊಸವರ್ಷ, ಪಠ್ಯಪುಸ್ತಕ, ಶಾಲಾಕೊಠಡಿ, ಬಾಲ್ಯ, ಯೌವ್ವನ, ಕಟ್ಟಡ, ಸಿನಿಮಾ ಮುಂತಾದವುಗಳು ಕುರಿತು ಬರೆದಿದ್ದಾರೆ ಎಂದು ತಿಳಿಸಿದರು.

- Advertisement - 

ಲಿಟ್ಲಲ್ ಹೇವನ್ ಪಂಕ್ಷನ್ ಹಾಲಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಲವು ಗಂಭೀರವಾಗಿಯೂ ಕೆಲವೂ ಹಾಸ್ಯ ಭರಿತವಾಗಿ ವಿಡಂಬನಾತ್ಮಕವಾಗಿ ಬರೆದಿದ್ದು ಕಿರುಗವನಗಳಲ್ಲಿ ಹಿರಿದಾದ ಅರ್ಥವನ್ನು ಕಲ್ಪಿಸಿದ್ದಾರೆ. ಅನ್ಯಜ್ಞಾನ ಶಿಸ್ತಿನಲ್ಲಿ ಕಲಿತ ಯಾವುದೇ ಶಿಕ್ಷಕರು ಕನ್ನಡದಲ್ಲಿ ಕೆಲಸ ಮಾಡುವುದರಿಂದ ಅನ್ನದ ಭಾಷೆಯಾಗಿಸುವುದಕ್ಕೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕವಿ ತಿಪ್ಪೇಸ್ವಾಮಿ ಅವರ ಕಾರ್ಯ ಶ್ಲಾಘನೀಯ.

ಬಹುತೇಕ ಪ್ರಾದೇಶಿಕತೆಗೆ ಒತ್ತುಕೊಟ್ಟು ಬರೆದ ಲೇಖಕರು ಕನ್ನಡಕ್ಕೆ ಹೊಸ ಭರವಸೆಯಾಗಿದ್ದು ಮತ್ತಷ್ಟು ಎಚ್ಚರದಿಂದ ಕೆಲಸ ಮಾಡಬೇಕೆಂದು ಹೇಳಿದರು. ವಿಜ್ಞಾನ ಉತ್ತರ ಸಿರಿ ಪುಸ್ತಕವು ವಿದ್ಯಾರ್ಥಿಗಳಿಗೆ ಮತ್ತು ಹಿರಿಯರು ಉಪಯುಕ್ತವಾಗಿದ್ದು ವಿಜ್ಞಾನವನ್ನು ಸರಳವಾಗಿ ಅರ್ಥೈಸುವಂತೆ ರೂಪಿಸಿದ್ದಾರೆ ಎಂದು ಹೇಳಿದರು.

- Advertisement - 

ಗಾಂಧಿವಾದಿ ಡಾ.ಎಚ್.ಕೆ.ಎಸ್.ಸ್ವಾಮಿ ಚರಕದ ಮಹತ್ವ ಹೇಳುತ್ತ ಕನ್ನಡ ಉಳುವಿಕೆಗಾಗಿ ವಿಜ್ಞಾನದ ಶಿಕ್ಷಕರು ಕೆಲಸ ಮಾಡುವುದು ಜೀವ ಪೋಷಕವಾದದ್ದು. ಆಧುನಿಕ ಕಾಲದಲ್ಲಿ ಬೆಲೆ ಏರಿಕೆಗಳ ನಡುವೆ ಸಹಜ ಜೀವನ ಸಾಗಿಸುವುದನ್ನು ವಿವರಿಸಿ ಹೇಳಿದರು.

ಪತಂಗ ಕೃತಿಕಾರ ತಿಪ್ಪೇಸ್ವಾಮಿ ಬಿ.ಜಿ. ಮಾತನಾಡಿ ಮನಸ್ಸಿದ್ದರೆ ಮಾರ್ಗ ಎಂಬುದು ಜೀವನದ ಧ್ಯೇಯ ವಾಕ್ಯವಾಗಿದ್ದು ಅದರಿಂದಲೇ ಆಶುಕವನ ಪುಸ್ತಕ ವಿಜ್ಞಾನ ಉತ್ತರ ಸಿರಿ ಕೃತಿ ರಚನೆಗೆ ಸಾಧ್ಯವಾಯಿತೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಲ್ಯಾಣಶೆಟ್ಟಿಯವರು ಎರಡು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಲೇಖಕರ ಕವನಗಳು ಅರ್ಥಪೂರ್ಣವಾಗಿದ್ದು ಕನ್ನಡ ಭಾಷಾ ಬೆಳವಣಿಗೆಗೆ ಇಂತಹ ಸಾಹಿತಿಗಳು ಮತ್ತಷ್ಟು ಹೆಚ್ಚಿನ ಕೊಡುಗೆ ನೀಡುವ ಮೂಲಕ ಕನ್ನಡವನ್ನು ಕಟ್ಟಬೇಕೆಂದರು. ಕಿರುಗವನಗಳು ಅನೇಕ ವಿಷಯಗಳನ್ನು ತಿಳಿಸುವ ಜೊತೆಗೆ ನೈತಿಕ ಜೀವನ ನಡೆಸುವಲ್ಲಿ ಕವನಗಳ ಕೊಡುಗೆ ಅಪಾರ ಎಂದರು.
ಪ್ರವೀಣ ಬೆಳೆಗೆರೆ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಂಜುನಾಥ ವಿ.ಎಸ್. ಮಹಾಂತೇಶ ಎನ್.ಟಿ., ರಮೇಶ್ ಅಯ್ಯನಹಳ್ಳಿ. ಶಿಕ್ಷಣ ಸಂಯೋಜಕ ಮಾರುತಿಭಂಡಾರಿ, ಶಿವಕುಮಾರ್, ತಿಪ್ಪೇಸ್ವಾಮಿ ಆರ್. ಗಂಗಾಧರಪ್ಪ ಬಿ, ಮಂಜುಳಮ್ಮ ಪಿ ಎಂ, ಕೃಷ್ಣಪ್ಪ, ತಿಪ್ಪಮ್ಮ, ರೇಖಾ ಕೆ, ವಿಶೃತ್ ಕುಮಾರ ಜಿ ಟಿ ಮುಂತಾದವರು ಹಾಜರಿದ್ದರು.

 

Share This Article
error: Content is protected !!
";