ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕರಾಗಿ ರಮೇಶ್, ಹೇಮಂತ್ ಕುಮಾರ್, ಶಿವಕುಮಾರ್ ಅವಿರೋಧ ಆಯ್ಕೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ನಿರ್ದೇಶಕರಾಗಿ ಹಲಗಲದ್ದಿ ಆರ್.ರಮೇಶ್, ಮಲ್ಲಪ್ಪನಹಳ್ಳಿ ಎಂ.ಎನ್.ಹೇಮಂತ್ ಕುಮಾರ್ ಮತ್ತು ಈ.ಶಿವಕುಮಾರ್ ಇವರು ಜಿಲ್ಲೆಯಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಗೆ ನಡೆದ ಚುನಾವಣೆಯಲ್ಲಿ 2025-26 ರಿಂದ 2029-30ರವರೆಗೆ ಅಂದರೆ 5 ವರ್ಷಗಳ ಅವಧಿಗೆ ಅವಿರೋಧವಾಗಿ ಆಯ್ಕೆ ಆಗುವ ಮೂಲಕ ಒಟ್ಟು ಚಿತ್ರದುರ್ಗ ಜಿಲ್ಲೆಯಿಂದ ನಾಲ್ಕು ಮಂದಿ ಕೇಂದ್ರ ಸ್ಥಾನದಲ್ಲಿ ಅಧಿಕಾರ ಹಿಡಿದಿರುವುದು ಹೆಮ್ಮೆಯ ವಿಷಯವಾಗಿದೆ.
ಇದಲ್ಲದೆ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರಾಗಿ ಆರ್.ಮಂಜುನಾಥ್ ಕೂಡ ಅವಿರೋಧ ಆಯ್ಕೆಯಾಗಿದ್ದಾರೆ.

- Advertisement - 

ಏನಿದು ಕೆಎಸ್ ಸಿಎ?
ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ (ಕೆಎಸ್ ಸಿಎ
) ಎನ್ನುವುದು ಕರ್ನಾಟಕದ ಗುತ್ತಿಗೆದಾರರ ಒಂದು ಪ್ರಮುಖ ಸಂಘಟನೆಯಾಗಿದೆ. ಇದು ಸರ್ಕಾರಕ್ಕೆ ಪಾವತಿಸಬೇಕಾದ ಬಾಕಿ ಹಣ ಮತ್ತು ಭ್ರಷ್ಟಾಚಾರದಂತಹ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಹೋರಾಟಗಳನ್ನು ಗಮನ ಸೆಳೆಯುವಂತೆ ಮಾಡುತ್ತಿದೆ.

- Advertisement - 

ಮುಖ್ಯವಾಗಿ ಈ ಸಂಘ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಮೃತ ಕೆಂಪಯ್ಯ ಇವರ ನಾಯಕತ್ವದಲ್ಲಿ ಸಂಘವು ಗಣನೀಯವಾಗಿ ಬೆಳೆದಿದೆ ಮತ್ತು ಸರ್ಕಾರದ ಗಮನ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಸಂಘದ ಪ್ರಮುಖ ಅಂಶಗಳು:
ರಾಜ್ಯಾದ್ಯಂತ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ತನ್ನ ಶಾಖೆಗಳನ್ನು ಹೊಂದಿದೆ. ಗುತ್ತಿಗೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಬರುವ ಮೂಲಕ ಹಲವು ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ.

ಬಾಕಿ ಹಣ ಪಾವತಿಸಲು ಗಡುವು ನೀಡುವುದು, ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆ ನೀಡುವುದು, ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮಾಡುವುದು ಸೇರಿದಂತೆ ಮತ್ತಿತರ ಕಾರ್ಯಗಳನ್ನು ರಚನಾತ್ಮಕವಾಗಿ ದಶಕಗಳ ಕಾಲದಿಂದ ಮಾಡಿಕೊಂಡು ಬರುತ್ತಿರುವ ಮೂಲಕ ಗುರುತಿಸಿಕೊಂಡಿದೆ.
ಕಾರ್ಯಾಲಯ: ಸಂಘದ ಮುಖ್ಯ ಕಚೇರಿ ಬೆಂಗಳೂರಿನ ಕೆಂಪೇಗೌಡ ರಸ್ತೆ ಮತ್ತು ಚಾಮರಾಜಪೇಟೆಯಲ್ಲಿ ಇದ್ದು ಕಾರ್ಯನಿರ್ವಹಿಸುತ್ತದೆ.

 

 

Share This Article
error: Content is protected !!
";