ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಯೋಗ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಜಾರ್ಕಂಡ್ ನ ರಾಂಚಿಯಲ್ಲಿ ನಡೆದ 50ನೇ ಸಬ್ ಜೂನಿಯರ್ ಹಾಗೂ ಜೂನಿಯರ್ ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಜೂನಿಯರ್ ಬಾಯ್ಸ್ 14ರಿಂದ 16 ವರ್ಷದ ವಿಭಾಗದಲ್ಲಿ ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದ ಕೆ. ಎನ್. ವಿಶ್ವನಾಥ್ ಭಾಗವಹಿಸಿ ಮೂರನೇ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ.
ವಿಶ್ವನಾಥ್ ರವರ ಸಾಧನೆಗೆ ಕರ್ನಾಟಕ ರಾಜ್ಯ ಅಮೆಚ್ಯುರ್ ಯೋಗ ಸ್ಪೋರ್ಟ್ಸ್ ಅಶೋಸಿಯೇಷನ್ ಗೌರವ ಕಾರ್ಯದರ್ಶಿಯಾದ ಎ. ನಟರಾಜ್ (ಯೋಗ ),
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಶೋಸಿಯೇಷನ್ ಅಧ್ಯಕ್ಷರಾದ ಎಂ. ಜಿ. ಅಮರ್ ನಾಥ್, ಖಜಾಂಚಿ ಕೆ. ಆರ್. ಶ್ಯಾಮ ಸುಂದರ್, ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು ಮತ್ತು ಯೋಗ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.

