ಆಹಾರ ಆಯೋಗದಿಂದ ಜಿಲ್ಲೆಯ ವಿವಿಧ ಸ್ಥಳಗಳಿಗೆ ದಿಢೀರ್ ಭೇಟಿ ಪರಿಶೀಲನೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹಾಗೂ ಸದಸ್ಯರಾದ ಲಿಂಗರಾಜ ಕೋಟೆ
, ಮಾರುತಿ ಎಂ. ದೊಡ್ಡಲಿಂಗಣ್ಣವರ ಹಾಗೂ ಕೆ.ಎಸ್.ವಿಜಯಲಕ್ಷ್ಮಿ ಅವರ ತಂಡ ಡಿ.29 ಹಾಗೂ 30 ರಂದು ಚಿತ್ರದುರ್ಗ ಜಿಲ್ಲೆಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. 

ಆಯೋಗ ಡಿ.29 ರಂದು ಜಿ ಆರ್ ಹಳ್ಳಿಯ ರಾಜ್ಯ ಉಗ್ರಾಣ ನಿಗಮದ ಗೋದಾಮು ಚಿತ್ರದುರ್ಗ ನಗರದ ಟಿ.ಎ.ಪಿ.ಸಿ.ಎಂ.ಎಸ್ ನಗರ ಮತ್ತು ಗ್ರಾಮಾಂತರ ಸಗಟು ಗೋದಾಮು, ಎ.ಪಿ.ಎಂ.ಸಿ ಆವರಣದಲ್ಲಿನ ಕೆ.ಎಫ್.ಸಿ.ಎಸ್.ಸಿ ಮಧ್ಯಾಹ್ನ ಉಪಹಾರ ಯೋಜನೆಯ ಸಗಟು ಗೋದಾಮಿಗೆ ಭೇಟಿ ಗೋದಾಮುಗಳಲ್ಲಿನ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲಿನೆ ನಡೆಸಿತು.

- Advertisement - 

ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಸೀಬಾರ ಗ್ರಾಮದ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಅಡುಗೆ ಕೋಣೆ, ದಾಸ್ತಾನು, ದಾಖಲೆಗಳನ್ನು ಪರಿಶೀಲಿಸಿ ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿ ಕುಂದು ಕೊರತೆಗಳನ್ನು ಆಲಿಸಿತು. ನಗರದ ಹೊಳಲ್ಕೆರೆ ರಸ್ತೆಯಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ದಾಸ್ತಾನು ಮತ್ತು ದಾಖಲೆಗಳನ್ನು ಪರಿಶೀಲಿಸಿತು.

ಡಿ.30 ರಂದು ಆಯೋಗದ ಅಧ್ಯಕ್ಷರು ಹಾಗೂ ಸದ್ಯರು ಜಿಲ್ಲಾಧಿಕಾರಿಗಳ ಸಂಭಾಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಂತರ ಜಿಲ್ಲೆಯ 14 ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಜಿಲ್ಲಾ ಆಸ್ಪತ್ರೆಯ ಒಳ ರೋಗಿಗಳ ವಿಭಾಗ ಹಾಗೂ ತಾಯಿ ಮತ್ತು ಚಿಕ್ಕ ಮಕ್ಕಳ ವಿಭಾಗದಲ್ಲಿನ ಅಡುಗೆ ಕೋಣೆ, ದಾಸ್ತಾನು, ದಾಖಲೆಗಳನ್ನು ಪರಿಶೀಲಿಸಿತು.

- Advertisement - 

ಚಳ್ಳಕೆರೆ ರಸ್ತೆಯಲ್ಲಿನ ಎಂ.ಎಸ್.ಪಿ.ಸಿ (ಮಹಿಳಾ ಆಹಾರ ಉತ್ಪದನ ಘಟಕ) ಬೇಟಿ ನೀಡಿ, ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಆಹಾರ ಸಾಮಗ್ರಿಗಳ ಪ್ಯಾಕಿಂಗ್ ಹಾಗೂ ದಾಸ್ತಾನು ಗುಣಮಟ್ಟ ಪರಿಶೀಲಿಸಿ ಕಾರ್ಮಿಕರೊಂದಿಗೆ ಸಮಲೋಚನೆ ನಡೆಸಿತು.  ನಗರದ ಕರುವಿನಕಟ್ಟೆ ಸರ್ಕಲ್ ಹತ್ತಿರವಿರುವ ಶ್ರೀ ಸದ್ಗುರು ಕಬೀರಾನಂದ ಆಶ್ರಮದ ವತಿಯಿಂದ ನಡೆಯುವ ವೃದ್ಧಾಶ್ರಮಕ್ಕೆ ಭೇಟಿ ನೀಡಿ ನಿವಾಸಿಗಳ ಜೊತೆಗೆ ಚರ್ಚಿಸಿತು. 

ಹೊಸಪೇಟೆ ರಸ್ತೆಯಲ್ಲಿನ ಚಿನ್ಮೂಲಾದ್ರಿ ಶಾಲೆ, ನಗರದ ಸರ್ಕಾರಿ ಬಾಲಕಿಯರ ಪ್ರೌಡಶಾಲೆ, ಮಲ್ಲನಕಟ್ಟೆಯ ಅಂಗನವಾಡಿ “ಎ” ಕೇಂದ್ರ, ಚಿತ್ರದುರ್ಗದ ಐ.ಯು.ಡಿ.ಪಿ ಲೇಔಟ್ ನಲ್ಲಿನ ಸರ್ಕಾರಿ ಬಾಲಕರ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ವಿಧ್ಯಾರ್ಥಿ ನಿಲಯ, ಗೂಳಯ್ಯನಹಟ್ಟಿ ಯಲ್ಲಿರುವ ಮೋರಾರ್ಜಿ ದೇಸಾಯಿ ಮಾದರಿ ಸರ್ಕಾರಿ ವಸತಿ ಶಾಲೆವಿದ್ಯಾನಗರದ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ಶಾಲೆ, ತಮಟಕಲ್ಲು ರಸ್ತೆ ಬಾಲಕರ ವಸತಿ ಶಾಲೆ ಇಲ್ಲಿಗೆ ಭೇಟಿ ನೀಡಿ ಅಡುಗೆ ಕೋಣೆ, ದಾಸ್ತಾನು ಹಾಗೂ ದಾಖಲೆಗಳನ್ನು ಪರಿಶೀಲಿಸಿ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿತು.

ಚಳ್ಳಕೆರೆ ರಸ್ತೆಯ ವಿ ಶೆಲ್ ಪೆಟ್ರೋಲ್ ಬಂಕ್ ಗೆ ಭೇಟಿ ನೀಡಿ ಗ್ರಾಹಕರಿಗೆ ನೀಡಲಾಗುವ ಸೌಲಭ್ಯಗಳ ಕುರಿತು ಹಾಗೂ ಗ್ರಾಹಕರಿಗೆ ಸರಿಯಾದ ಪ್ರಮಾಣ ಇಂಧನ ಪೂರೈಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಯಿತು. ಬಿ.ಡಿ ರಸ್ತೆ ಆಜಾದ ಮಿಲ್ ಎದುರುಗಡೆ ಸಾಯಿ ವಿನಾಯಕ ಮೆಡಿಕಲ್ಸ್ ಚಿತ್ರದುರ್ಗ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿತು.

ಭೇಟಿ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಸಮಾಜ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ದಿವಾಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

 

Share This Article
error: Content is protected !!
";