ಭಾರತದ ಶ್ರೇಷ್ಠ ಎತ್ತಿ ತೋರಿಸಿದ ಶಿಲ್ಪ ಕಲೆಗಳು-ಸಿಟಿ ರವಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಭಾರತದ ಶ್ರೇಷ್ಠ ಇತಿಹಾಸವನ್ನು ಜಗತ್ತಿನಾದ್ಯಂತ ಎತ್ತಿ ತೋರಿಸುವಲ್ಲಿ ನಮ್ಮ ಶಿಲ್ಪ ಕಲೆಗಳು ಪ್ರಮುಖ ಪಾತ್ರವನ್ನು ವಹಿಸಿವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಹೇಳಿದರು.

ಚಿಕ್ಕಮಗಳೂರು ಜಿಲ್ಲಾಡಳಿತದ ನೇತೃತ್ವದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು ಭಾಗವಹಿಸಿ ಮಾತನಾಡಿದರು.

- Advertisement - 

ಭಾರತದ ಶ್ರೇಷ್ಠ ಇತಿಹಾಸವನ್ನು ಜಗತ್ತಿನಾದ್ಯಂತ ಎತ್ತಿ ತೋರಿಸುವಲ್ಲಿ ನಮ್ಮ ಶಿಲ್ಪಕಲೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಅಮರಶಿಲ್ಪಿ ಜಕಣಾಚಾರಿ ಸರ್ವ ಸಮುದಾಯಗಳಿಗೂ ಸೇರಿದವರು ಎಂದರು.

ಹೊಯ್ಸಳ ಸಾಮ್ರಾಜ್ಯದ ಗತವೈಭವ ವರ್ತಮಾನದಲ್ಲೂ ಪ್ರದರ್ಶನವಾಗಲು ಕಾರಣ ತನ್ನೊಳಗಿದ್ದ ತಪಸ್ಸನ್ನು ಶಿಲೆಯ ಮೇಲೆ ಪ್ರಯೋಗಿಸಿ ಅದನ್ನು ಶಿಲ್ಪವಾಗಿಸಿ ಅಮರವಾಗಿಸಿದಂತಹ ಅಮರಶಿಲ್ಪಿ ಜಕಣಾಚಾರಿ ಎಂದು ಸಿಟಿ ರವಿ ಹೇಳಿದರು.

- Advertisement - 

ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕರಾದ ಹರ್ಷವರ್ಧನ್ ನಿಟ್ಟೆ, ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾದ ಅಧ್ಯಕ್ಷ ಎಂ.ಜೆ. ಚಂದ್ರಶೇಖರ್, ಗೌರವ ಅಧ್ಯಕ್ಷ ಚೇತನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್. ಟಿ. ನಾರಾಯಣಾಚಾರ್,

ವಿಶ್ವಕರ್ಮ ಕೈಗಾರಿಕಾ ಮತ್ತು ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ರತೀಶ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಭೀಮಾಚಾರ್, ವಿಶ್ವಕರ್ಮ ಸಂಘದ ಮುಖಂಡರಾದ ಉಮಾ ಶಂಕರ್ ಸೇರಿದಂತೆ ವಿವಿಧ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.

 

 

Share This Article
error: Content is protected !!
";