ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳದಿಂದ 2 ಲಕ್ಷ ಡಿಡಿ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲೂಕು ಇವರ ವತಿಯಿಂದ ಮದುರೆ ಹೋಬಳಿಯ ನರಸಯ್ಯನ ಅಗ್ರಹಾರ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ವೀರೇಂದ್ರ ಹೆಗ್ಗಡೆಯವರು 2 ಲಕ್ಷ ಅನುದಾನ ಮಂಜೂರು ಮಾಡಿದ್ದು ಇಂದು ಜಿಲ್ಲಾ ನಿರ್ದೇಶಕ ಉಮಾರಬ್ಬ ರವರು ಸಮಿತಿಗೆ 2 ಲಕ್ಷದ ಡಿಡಿ ಹಸ್ತಾಂತರ ಮಾಡಿದರು.

ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಆಗಬೇಕು ಆಗ ಮಾತ್ರ ರೈತರಿಗೆ ಹೆಚ್ಚಿನ ಆಧಾಯ ದೊರಕುತ್ತದೆ ಗುಣಮಟ್ಟದ ಹಾಲು ಹಾಕಲು ತಿಳಿಸಲಾಯಿತು.

- Advertisement - 

 ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ಗ್ರಾಂ.ಪ ಅಧ್ಯಕ್ಷರಾದ ಮನು,ಡೈರಿ ಅಧ್ಯಕ್ಷರಾದ ಗಂಗಮ್ಮ, ಡೈರಿ ನಿರ್ದೇಶಕರಾದ ಕೃಷ್ಣಪ್ಪ, ಕಾರ್ಯದರ್ಶಿ ಪ್ರಸನ್ನ ಸೇರಿದಂತೆ ಮತ್ತಿತರರು ಇದ್ದರು.

 

- Advertisement - 

Share This Article
error: Content is protected !!
";