ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಪ್ಪು ರಾಹುಲ್ ಗಾಂಧಿಯ “ವೋಟ್‌ಚೋರಿ” ಹೈಡ್ರೋಜನ್‌ಬಾಂಬ್‌ಕರ್ನಾಟಕದಲ್ಲಿ ಠುಸ್‌ಪಟಾಕಿ ಆಗಿದೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಸುಳ್ಳು ಕಥೆ ಕಟ್ಟಿ “ಮತಗಳ್ಳತನದ ಡ್ರಾಮಾ” ಆಡುತ್ತಿರುವ ಭಾರತೀಯ ಕಾಂಗ್ರೆಸ್ ಪಕ್ಷದ ಕಾಂಗ್ರೆಸ್ಸಿಗರಿಗೇ, ಸಿದ್ದರಾಮಯ್ಯ ಸರ್ಕಾರದ ವರದಿಯ ಮೂಲಕ ಮತದಾರರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಜೆಡಿಎಸ್ ದೂರಿದೆ.
ಚುನಾವಣೆಗಳಲ್ಲಿ ಬಳಕೆಯಾಗುತ್ತಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಇವಿಎಂ ವಿಶ್ವಾಸಾರ್ಹತೆ ಮತ್ತು ನಿಖರತೆ ಬಗ್ಗೆ ರಾಜ್ಯದಲ್ಲಿ ಬಹುಪಾಲು ಶೇ.83.61% ಮತದಾರರು ವಿಶ್ವಾಸ ಹೊಂದಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ್ದ ಅಧ್ಯಯನ ಬಹಿರಂಗಗೊಂಡಿದೆ ಎಂದು ಜೆಡಿಎಸ್ ತಿಳಿಸಿದೆ.
ಸಮೀಕ್ಷೆಯ ಫಲಿತಾಂಶಗಳು:
84.55% ಪ್ರತಿಸ್ಪಂದಕರು ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದು ನಂಬುತ್ತಾರೆ.
ಇವಿಎಂಗಳು ವಿಶ್ವಾಸಾರ್ಹವೆಂದು ನಂಬಿದ 83.61% ನಾಗರಿಕರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಸ್ವಂತ ಜಿಲ್ಲೆ ಕಲಬುರಗಿಯಲ್ಲಿ ಶೇ 95ರಷ್ಟು ಮತದಾರರು ಹಾಗೂ ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕೂಡ ಶೇ.89ರಷ್ಟು ಜನರು ಇವಿಎಂ ಬಳಕೆಯ ನಿಖರತೆ ಬಗ್ಗೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಈ ರಿಪೋರ್ಟ್‌ಇವಿಎಂ ಬಗ್ಗೆ ಕಾಂಗ್ರೆಸ್‌ಪಕ್ಷ ಸೃಷ್ಟಿಸಿದ “ವೋಟ್‌ಚೋರಿ” ಟೋಲ್ ಕಿಟ್ ರಾಜಕೀಯವನ್ನು ಸುಳ್ಳು ಎಂದು ಸಾಬೀತಾಗಿದೆ ಎಂದು ಜೆಡಿಎಸ್ ಹರಿಹಾಯ್ದಿದೆ.
ರಾಹುಲ್‌ಗಾಂಧಿಯ ವೋಟ್‌ಚೋರಿ ನಾಟಕದಲ್ಲಿ ಪಾತ್ರಧಾರಿಗಳಾಗಿರುವ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಈಗ ಜೋಕರ್‌ಗಳಾಗಿದ್ದು, ಅದ್ಯಾವ ಮುಖ ಇಟ್ಕೊಂಡು ಇನ್ಮುಂದೆ ಜನರ ಬಳಿ ಮತಗಳ್ಳತನ ಎಂದು ಮಾತನಾಡುತ್ತೀರಿ! ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.

