ಬೆಂಗಳೂರಿನಲ್ಲೇ 10 ಹೆರಿಗೆ ಆಸ್ಪತ್ರೆಗಳು ಬಂದ್‌ ಮಾಡಿರುವುದು ಸುಳ್ಳೇ?

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ, ಬೆಂಗಳೂರಿನಲ್ಲೇ 10 ಹೆರಿಗೆ ಆಸ್ಪತ್ರೆಗಳು ಬಂದ್‌ಮಾಡಿರುವುದು ಸುಳ್ಳೇ ? ಎಂದು ಜೆಡಿಎಸ್ ಪ್ರಶ್ನಿಸಿದೆ.

ಆರೋಗ್ಯ ಇಲಾಖೆಯನ್ನು ಹಂತ ಹಂತವಾಗಿ ಬಲಹೀನಗೊಳಿಸುತ್ತಿರುವ ಅಸಮರ್ಥ ಸಚಿವರೇ, ಒಂದೂ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚುವುದಿಲ್ಲ ಎಂದು ಸುಳ್ಳು ಹೇಳಿ, ಈಗ ಸಾರ್ವಜನಿಕವಾಗಿ ಬೆತ್ತಲಾಗಿದ್ದೀರಿ.

- Advertisement - 

ಹೀಗೆ ಸರ್ಕಾರಿ ಆಸ್ಪತ್ರೆಗಳನ್ನು ಮುಚ್ಚಿದರೇ, ಬಡವರು ಚಿಕಿತ್ಸೆಗಾಗಿ ಎಲ್ಲಿಗೆ ಹೋಗಬೇಕು. ಲಕ್ಷಾಂತರ ರೂ. ವೆಚ್ಚ ಭರಿಸಲು ಅವರಿಂದ ಸಾಧ್ಯವೇ ? ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರೂ ಸಹ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ.

ಜನ ವಿರೋಧಿ ಕಾಂಗ್ರೆಸ್‌ಸರ್ಕಾರದ ಹೊಣೆಗೇಡಿತನ ಹಾಗೂ ಭಂಡತನ ರಾಜ್ಯದ ಜನರ ಮುಂದೆ ಬಟ ಬಯಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

- Advertisement - 

 

 

Share This Article
error: Content is protected !!
";