ಹುಟ್ಟೂರು ಓದಿದ ಶಾಲೆಗೆ ಭೇಟಿ ಕೊಟ್ಟು ಕನ್ನಡ ಶಾಲೆಗಳು ಉಳಿಯಬೇಕೆಂದ ಅಮೆರಿಕ ಕನ್ನಡಿಗ ಶ್ರೀನಾಥ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕು ಕಸವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಅಮೆರಿಕಾದ ಅಟ್ಲಾಟದಲ್ಲಿ ನೆಲೆಸಿರುವ ಕನ್ನಡಿಗ ಶ್ರೀನಾಥ್ ರಂಗಸ್ವಾಮಿ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಇವತ್ತು ಕುಟುಂಬದವರ ಜೊತೆಯಲ್ಲಿ ಭೇಟಿಕೊಟ್ಟು ಮಕ್ಕಳ ಜೊತೆಯಲ್ಲಿ ಭೋಜನ ಸ್ವೀಕರಿಸಿ
, ಹೊಸ ವರ್ಷದ ಶುಭಾಶಯ ಕೋರಿದ ಪ್ರಸಂಗ ಶುಕ್ರವಾರ ನಡೆದಿದೆ.

ಇದೇ ವೇಳೆ ಶ್ರೀನಾಥ್ ರಂಗಸ್ವಾಮಿ ಅವರು ಶಾಲಾ ಮಕ್ಕಳೊಂದಿಗೆ ಸಂವಾದ ಮಾಡಿದರು. ಅಲ್ಲದೆ ಮಕ್ಕಳೊಟ್ಟಿಗೆ ಮಾತನಾಡಿ ಶಾಲೆಯ ಅಭಿವೃದ್ಧಿ ಬಗ್ಗೆ ಚರ್ಚಿಸಿ, ಏನಾದ್ರೂ ಮಾಡಿ ಈ ಶಾಲೆಯನ್ನು ಉಳಿಸಬೇಕು ಕನ್ನಡ ಶಾಲೆಗಳು ಬೆಳೆಯಬೇಕು. ನಾವು ಅಮೆರಿಕದಲ್ಲಿದ್ದರೂ ಸಹ ಕನ್ನಡ ರಾಜ್ಯೋತ್ಸವ, ಕನ್ನಡ ಕಾರ್ಯಕ್ರಮಗಳು ಅಕ್ಕ ಸಮ್ಮೇಳನ ಇತ್ಯಾದಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇವೆ ಎಂದು ಭಾವುಕರಾಗಿ ನುಡಿದರು.

- Advertisement - 

ಅಮೇರಿಕಾದಲ್ಲಿ ಕನ್ನಡದವರೆಲ್ಲ ಒಟ್ಟಾಗಿ ಹಬ್ಬ, ಹರಿದಿನಗಳನ್ನು  ಆಚರಿಸುತ್ತೇವೆ. ಕನ್ನಡದ ಬಗ್ಗೆ ಚರ್ಚಾಗೋಷ್ಠಿ, ಹಾಡುಗಳು, ಸಂವಾದ ಕಾರ್ಯಕ್ರಮ ನಡೆಸುತ್ತೇವೆ. ಕನ್ನಡ ಶಾಲೆಗಳು ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಕಸವನಹಳ್ಳಿ ರಮೇಶ್, ಮುಖ್ಯ ಶಿಕ್ಷಕ ರಂಗನಾಥ್, ಎಸ್. ಡಿಎಮ್ ಸಿ ಅಧ್ಯಕ್ಷ ಮಂಜುನಾಥ್, ರಾಮಚಂದ್ರ ಕಸವನಹಳ್ಳಿ, ಸಿಆರ್ ಪಿ ಶ್ರೀನಿವಾಸ್, ಸಹಶಿಕ್ಷಕ  ಬಸವರಾಜ್, ಗ್ರಾಮಸ್ಥರು, ಅಂಗನವಾಡಿ ಶಿಕ್ಷಕರು, ಶಾಲಾ ಮಕ್ಕಳು ಇದ್ದರು.

- Advertisement - 

 

 

Share This Article
error: Content is protected !!
";