ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಅವರು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿ ಬ್ಯಾನರ್​​ ಕಟ್ಟುವ ವಿಚಾರದಲ್ಲಿ ನಡೆದ ಗಲಾಟೆಯ ತೀವ್ರ ರೂಪಕ್ಕೆ ಓರ್ವ ಯುವಕ ಸಾವನ್ನಪ್ಪಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ವಿರೋಧಿಗಳ ಗುಂಪಿನಿಂದಲೇ ಗುಂಡು ಹಾರಿಸಲಾಗಿದೆ. ಯುವಕನ ಸಾವಿಗೆ ಅವರೇ ಕಾರಣ ಎಂದು ಆರೋಪಿಸಿದ್ದಾರೆ.

- Advertisement - 

ಮೃತಪಟ್ಟ ಯುವಕನ ತ್ಯಾಗವು ವಾಲ್ಮೀಕಿ ಅಜ್ಜನ ಉದ್ದೇಶಗಳಿಗಾಗಿ ಮತ್ತು ಜನಾರ್ದನ ರೆಡ್ಡಿ ರಾಜಕೀಯ ಅಂತ್ಯಕ್ಕಾಗಿ ಆಗಿದೆ. ಜನಾರ್ದನ ರೆಡ್ಡಿ ಎಂತಹ ಹೇಡಿ ಮತ್ತು ಅವರು ಯಾವ ರೀತಿಯ ಕೆಲಸಗಳನ್ನು ಮಾಡುತ್ತಾರೆ ಎಂಬುದನ್ನು ಜನರಿಗೆ ತೋರಿಸುತ್ತೇನೆ ಎಂದು ಶಾಸಕ ನಾರಾ ಭರತ್​​ ರೆಡ್ಡಿ ಶಪಥ ಮಾಡಿದರು.

- Advertisement - 
Share This Article
error: Content is protected !!
";