ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಳ್ಳಾರಿ ನಗರದಲ್ಲಿ ಜನವರಿ 3ರಂದು ನಡೆಯಲಿರುವ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಸಂಬಂಧ ಬ್ಯಾನರ್ ಅಳವಡಿಕೆ ವೇಳೆ ಶುರುವಾದ ಘರ್ಷಣೆ ಕಾಂಗ್ರೆಸ್ ಕಾರ್ಯಕರ್ತನ ಬಲಿ ತೆಗೆದುಕೊಂಡಿದೆ.

ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟುತ್ತಿದ್ದಾಗ ಎರಡು ಗುಂಪುಗಳ ನಡುವೆ ಗಲಾಟೆ ಸಂಭವಿಸಿ ಕಲ್ಲು ತೂರಾಟ, ದೊಣ್ಣೆಗಳ ಬಳಕೆ ಮತ್ತು ಖಾರದ ಪುಡಿ ಎರಚಾಟ ಸೇರಿದಂತೆ ತೀವ್ರ ಸ್ವರೂಪ ಪಡೆದುಕೊಂಡಿತ್ತು ಎಂಬುದು ಘಟನಾ ಸ್ಥಳದ ವಿಡಿಯೋದಿಂದ ತಿಳಿದುಬಂದಿದೆ.

- Advertisement - 

ಪರಿಸ್ಥಿತಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಶಾಸಕ ಭರತ್ ರೆಡ್ಡಿ ಅವರ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಗನ್‌ ಮ್ಯಾನ್‌ಗಳು ಏರ್ ಫೈರ್ ಮಾಡಿದ್ದಾರೆ. ಇದೇ ವೇಳೆ ಪೊಲೀಸರೂ ಕೂಡ ಗುಂಪು ಚದುರಿಸಲು ಏರ್ ಫೈರ್ ಮಾಡಿದ್ದು, ಒಂದು ಮಿಸ್‌ ಫೈರ್ ಆಗಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬುವವರಿಗೆ ಗುಂಡು ತಗುಲಿದೆ.

ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಜಶೇಖರ್ ರೆಡ್ಡಿ ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿಲಾಗಿದೆ.

- Advertisement - 

 

Share This Article
error: Content is protected !!
";