ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಕುರ್ಚಿ ಉಳಿಸಿಕೊಳ್ಳಲು ಆ ವರದಿಯನ್ನು ಅಳಿಸಿ ಬಿಟ್ಟಿರಾ
ಡಿಲೀಟ್ ರಾಮಯ್ಯ @ ವೈಟ್ನರ್ ರಾಮಯ್ಯ? ಎಂದು ಜೆಡಿಎಸ್ ಆರೋಪಿಸಿದೆ.
ತನ್ನದೇ ಸರ್ಕಾರದ ವರದಿಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಸಿದ್ದರಾಮಯ್ಯ, ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ನಿಂದ ಆ ಸಮೀಕ್ಷಾ ವರದಿಯನ್ನೇ ಡಿಲೀಟ್ ಮಾಡಿಸಿದ್ದಾರೆ ಎಂದು ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವೆಂದು 84.55% ನಾಗರಿಕರು ನಂಬಿದ್ದಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿತ್ತು. ಶೇ. 83.61% ಜನರು ಇವಿಎಂಗಳ ಮೇಲೆ ವಿಶ್ವಾಸವಿದೆ ಎಂದು ಚುನಾವಣೆಗಳ ಪಾರದರ್ಶಕತೆಯನ್ನು ಒಪ್ಪಿಕೊಂಡಿದ್ದಾರೆ.
ಕರ್ನಾಟಕ ಸರ್ಕಾರದ ಸಮೀಕ್ಷಾ ವರದಿಯಿಂದ ರಾಹುಲ್ ಗಾಂಧಿ ಅವರ “ವೋಟ್ ಚೋರಿ” ಸುಳ್ಳು ನಿರೂಪಣೆ ಠುಸ್ ಪಟಾಕಿಯಾಗಿದೆ ಎಂದು ಜೆಡಿಎಸ್ ಟೀಕಿಸಿದೆ.
ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುತ್ತಿದ್ದಂತೆ, ಸಾರ್ವಜನಿಕ ಅಭಿಪ್ರಾಯವನ್ನು ಸ್ವೀಕರಿಸುವ ಬದಲು, ಕಾಂಗ್ರೆಸ್ಸಿಗರು ಆ ವರದಿಯನ್ನೇ ತೆಗೆಸಿ ಹಾಕಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ.! ಎಂದು ಜೆಡಿಎಸ್ ಟೀಕಿಸಿದೆ.

