ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ 2025-26ನೇ ಸಾಲಿಗೆ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಫಿಜಿಯೋಥೆರಪಿ ಕೋರ್ಸ್ನಡಿ ಬಿ.ಎಸ್.ಸಿ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ 40, ಬಿ.ಎಸ್.ಸಿ ಅರಿವಳಿಕೆ ಮತ್ತು ಅಪರೇಷನ್ ಥಿಯೇಟರ್ ತಂತ್ರಜ್ಞಾನದಲ್ಲಿ 30, ಸಾರ್ವಜನಿಕ ಆರೋಗ್ಯದಲ್ಲಿ ಪದವಿದಲ್ಲಿ 30 ಹಾಗೂ ಬ್ಯಾಚುಲರ್ ಆಫ್ ಫಿಸಿಯೋಥೆರಪಿಯಲ್ಲಿ 40 ಸೀಟುಗಳನ್ನು ವಾಕ್ ಇನ್ ಆಡ್ಮಿಷನ್ ಮೂಲಕ ಮೆರಿಟ್ ಅಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುವುದು.
ಜಿ.ಆರ್.ಹಳ್ಳಿಯ ದಾವಣಗೆರೆ ವಿ.ವಿ. ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿರುವ ನಿರ್ದೇಶಕರ ಕೊಠಡಿಯಲ್ಲಿ ಜ.7 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೀಟುಗಳ ಹಂಚಿಕೆ ಮಾಡಲಾಗುವುದು.
ಕೆ.ಇ.ಎ ನಲ್ಲಿ ನೊಂದಾಯಿತಿ ಅಭ್ಯರ್ಥಿಗಳ ಮೆರಿಟ್, ಕೆ.ಇ.ಎಯಿಂದ ಸೀಟು ಹಂಚಿಕೆಯಾಗದವರಿಗೆ ಸೀಟ್ ಮ್ಯಾಟ್ರಿಕ್ಸ್ ಹಾಗೂ ರೋಸ್ಟರ್ ಆಧಾರದಲ್ಲಿ ಸೀಟು ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಕೆ.ಇ.ಎ. ನಲ್ಲಿ ಹಂಚಿಕೆ ಮಾಡಿ ಉಳಿಕೆಯಾಗಿರುವ ಆಲೈಡ್ ಹೆಲ್ತ್ ಸೈನ್ಸ್ ಹಾಗೂ ಪಿಜಿಯೊಥೆರಪಿ ಸೀಟುಗಳನ್ನು ಮಾತ್ರ ಪರಿಣಗಿಸಲಾಗುವುದು.
ಪ್ರವೇಶ ಪಡೆಯಲು ಇಚ್ಛಿಸುವರು ವೆಬ್ ಸೈಟ್ https://cmcrichitradurga.karnataka.gov.in ಅರ್ಜಿ ಸಲ್ಲಿಸಬಹುದು. ವಾಕ್ ಇನ್ ಅಡ್ಮಿಷನ್ ವೇಳೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸೂಚಿಸಿರುವ ಅವಶ್ಯಕ ಮೂಲ ದಾಖಲೆಗಳನ್ನು ಹಾಜರುಪಡಿಸಿ, ಒಂದು ಸೆಟ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಜ.8 ರಂದು ವೆಬ್ ಸೈಟ್‌ನಲ್ಲಿ ಸೀಟು ಹಂಚಿಕೆ ಫಲಿತಾಂಶ ಪ್ರಕಟಿಸಲಾಗುವುದು. ಜ.9 ರಂದು ಸಂಜೆ 5 ಗಂಟೆಯ ಒಳಗಾಗಿ ಅಭ್ಯರ್ಥಿಗಳು ಕಡ್ಡಾಯವಾಗಿ ದಾಖಲಾತಿಯನ್ನು ಪಡೆಯಬೇಕು ಎಂದು ಪ್ರಕಟಣೆ ತಿಳಿಸಿದೆ.

