ಬಳ್ಳಾರಿ ಎಸ್​​ಪಿಗೆ ಜಮೀರ್​​ ಖಾನ್​​ ಎಷ್ಟು ಬಿಡ್ಡಿಂಗ್​ ಮಾಡಿದ್ದರು- ಶೋಭಾ ಪ್ರಶ್ನೆ

News Desk
- Advertisement -  - Advertisement - 

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಳ್ಳಾರಿ ಜಿಲ್ಲೆಗೆ ನೂತನವಾಗಿ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರ್ ಅಮಾನತು ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

ಘಟನೆ ನಡೆದ ಸ್ಥಳದಲ್ಲೇ ಪವನ್ ನೆಜ್ಜೂರ್ ಇದ್ದರು ಎಂಬುದಕ್ಕೆ ಮಾಧ್ಯಮ ವರದಿಗಳು ಪುರಾವೆ ಒದಗಿಸಿವೆ. ಆದರೆ ಅವರ ಮೇಲಿನ ಯಾವ ದ್ವೇಷಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಗೊತ್ತಾಗಬೇಕು ಎಂದು ಕೇಂದ್ರ ಸಚಿವರು ಆಗ್ರಹ ಮಾಡಿದರು.

- Advertisement - 

ಬಳ್ಳಾರಿ ಎಸ್​​ಪಿಗೆ ಜಮೀರ್​​ ಖಾನ್​​ ಅವರು ಎಷ್ಟು ಬಿಡ್ಡಿಂಗ್​ ಮಾಡಿದ್ದರು ಎಂದು ಅವರು ಪ್ರಶ್ನಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಇದರಿಂದ ರಾಜ್ಯದ ಪೊಲೀಸ್ ಅಧಿಕಾರಿಗಳ ನೈತಿಕ ಬಲ ಕುಗ್ಗುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

 

- Advertisement - 

 

Share This Article
error: Content is protected !!
";