ಧರ್ಮ ಗ್ರಂಥಗಳು ಆಲೋಚನೆ ನಾಶ ಮಾಡಿದರೆ, ಪುಸ್ತಕಗಳು ಹೊಸ ಆಲೋಚನೆ ಹುಟ್ಟು ಹಾಕಲಿವೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬುದ್ಧನಗರ ಮಾರ್ಗದಲ್ಲಿನ ಸಾವಿತ್ರಿಬಾ ಪುಲೆ ಸರ್ಕಲ್ ಬೋರ್ಡ್ ಗೆ ಅಂಬೇಡ್ಕರ್ ವಿಚಾರ ವೇದಿಕೆಯ ಸದಸ್ಯರು ಹೂವಿನ ಹಾರ ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ನಗರದ ಮಹಾತ್ಮ ಜ್ಯೋತಿಬಾ ಪುಲೆ ಸ್ಪರ್ಧಾತ್ಮಕ ಕೇಂದ್ರದಲ್ಲಿ ಜಂಬೂದ್ವೀಪ ಕರ್ನಾಟಕ ಹಾಗೂ ಅಂಬೇಡ್ಕರ್ ವಿಚಾರ ವೇದಿಕೆ, ಚಿತ್ರದುರ್ಗ ಇವರು ಸಾವಿತ್ರಿಬಾ ಪುಲೆ ಜನ್ಮಾದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಪನ್ಯಾಸಕ ವೇದಾಂತ ಏಳಂಜಿ ಮಾತನಾಡಿ, ಸಾವಿತ್ರಿಬಾ ಪುಲೆ ಮತ್ತು ಜ್ಯೋತಿಬಾ ಪುಲೆ ದಂಪತಿಗಳನ್ನು ಒಬ್ಬರು ಮತ್ತೊಬ್ಬರನ್ನು ಹೊರತು ಪಡಿಸಿ ನೋಡಲು ಸಾಧ್ಯವಿಲ್ಲ. ದೇಶದ ಎಲ್ಲಾ ಸಮುದಾಯಗಳು ಸಾವಿತ್ರಿಬಾ ಪುಲೆ ಅವರ ಜೀವನವನ್ನು ಅರಿಯಬೇಕು.  ಕುಟುಂಬ ಮೇಲ್ವರ್ಗದ ವಿರೋಧದ ನಡುವೆ ಸ್ವತಃ ಗಂಡನಿಂದ ಅಕ್ಷರ ಕಲೆತು ದೇಶದ ಪ್ರಥಮ ಶಿಕ್ಷಕಿಯಾದರು ಎಂದರು.

- Advertisement - 

ಅಸ್ಪೃಶ್ಯರ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಶಾಲೆಗಳನ್ನು ತೆರೆದು ಸಾವಿರಾರು ಜನರಿಗೆ ಅಕ್ಷರ ಕಲಿಸುವ ಜೊತೆಗೆ ಸ್ವಾಭಿಮಾನದ ಘನತೆಯ ಬದುಕನ್ನು ಕಲಿಸಿಕೊಟ್ಟರು.

ಬಡ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ, ವಿದ್ಯಾರ್ಥಿ ಭತ್ಯೆ, ಬಟ್ಟೆಗಳನ್ನು ನೀಡಿದರು. ಮನೆಮನೆಗಳಿಗೆ ತೆರಳಿ ತಂದೆ-ತಾಯಿಯರಿಗೆ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು. ಒಳಜಾತಿ ವೈವಿವಾಹಿಕ ಕಟ್ಟುಪಾಡು ಜಾತಿಯತೆಗೆ ಮೂಲ ಕಾರಣವೆಂದು ಅರಿತು ಅಂತರಜಾತಿ ವಿವಾಹಗಳನ್ನು ಮಾಡಿದರು. ಪುರೋಹಿತರಿಲ್ಲದ, ಮಂತ್ರಘೋಷಗಳಿಲ್ಲದ ಕಡಿಮೆ ಖರ್ಚಿನ ಸರಳ ವಿವಾಹಗಳನ್ನು ಏರ್ಪಡಿಸಿದರು.

- Advertisement - 

ಜ್ಯೋತಿಬಾ ಪುಲೆ ಸ್ವತಃ ಮಂಗಳಷ್ಟಾಕಗಳನ್ನು ಬರೆದು ಓದಿಸಿದರು. ಗಂಡು-ಹೆಣ್ಣು ಸಮಾನತೆಯನ್ನು ಸಾರಿದರು. ಮಹಿಳಾ ಸಂಘಟನೆಗಳನ್ನು ಸ್ಥಾಪಿಸಿ ಹಲವು ಮಹಿಳೆಯರಿಗೆ ಪ್ರೇರಣೆಯಾದರು. ಪುಲೆ ದಂಪತಿಗಳ ಸತ್ಯಶೋಧಕ ಸಮಾಜದಿಂದ ಮೌಢ್ಯ ನಿರ್ಮೂಲನೆ, ವಿಧವಾ ಪುನರ್ ವಿವಾಹ ಮಾಡಿದರು.ಕ್ಷಾಮ ಬರಗಾಲದ ಪರಿಸ್ಥಿತಿಯಿಲ್ಲಿಯೂ  ದೀನದಲಿತರ ಪರವಾಗಿದ್ದು ಜೀವತೆತ್ತರು ಎಂದು ಹೇಳಿದರು.

ಶಿಕ್ಷಕ ಪ್ರದೀಪ್ ಮಾತನಾಡಿ ಶಾಲೆಗಳಲ್ಲಿ ಸರಸ್ವತಿ ಪೂಜಿಸುತ್ತೇವೆ. ಸರಸ್ವತಿ ಪುಸ್ತಕ ಬರೆದವರು ಅಲ್ಲ ಶಾಲೆಗಳನ್ನು ಕಟ್ಟಿಸಿದವರು ಅಲ್ಲ. ನಿಜವಾಗಿ ಶಾಲೆ ಕಟ್ಟಿಸಿ ಪುಸ್ತಕ ಕೊಟ್ಟರು. ಮೇಲ್ವರ್ಗಗಳ ಮೋಸಕ್ಕೆ ಸಿಲುಕಿ ಪಶುಗಳಂತೆ ದುಡಿವ ಶೂದ್ರಾತಿಶೂದ್ರರಿಗೆ ಯೋಚಿಸಲು ಕಲೆಸಿದರು. ಅಂಬೇಡ್ಕರರಿಗೆ ಸ್ಫೂರ್ತಿಯಾದರು ಎಂದರು.

ಕವಿ ಶಿವಶಂಕರ ಸೀಗೆಹಟ್ಟಿಯವರು ಸಾವಿತ್ರಮ್ಮ ಸಾವಿತ್ರಮ್ಮ ಸಾಟಿಯುಂಟೆ ಅಕ್ಷರದಮ್ಮ ಎಂಬ ಸ್ವರಚಿತ ಪದ್ಯವನ್ನು ಹಾಡಿದರು. ಜ್ಯೋತಿಬಾ ಪುಲೆ ಅವರನ್ನು ಇತಿಹಾಸ ಸದಾ ಸ್ಮರಿಸಬೇಕು. ಅವರನ್ನು  ಕೊಲ್ಲಲು ೫೦ ರೂ. ಗಳನ್ನು ನೀಡಿದ್ದ ವ್ಯಕ್ತಿ ಅಸ್ಪೃಶ್ಯರಿಗಾಗಿ ಜೀವನವನ್ನು ಮೂಡುಪಾಗಿಟ್ಟಿದ್ದನ್ನು ಕೇಳಿ ಪರಿವರ್ತನೆಯಾದನು. ತನ್ನನ್ನು ಕೊಲ್ಲಲು ಬಂದವರನ್ನು ಮನಃ ಪರಿವರ್ತನೆ ಮಾಡಿದ್ದು ಚರಿತ್ರೆಯಲ್ಲಿ ಬುದ್ಧ ಗುರು ಜ್ಯೋತಿಬಾ ಪುಲೆ. ದೇಶದ ಪ್ರಥಮ ಶಿಕ್ಷಕಿಯಾಗಿ ಅಂದಿನ ಬ್ರಾಹ್ಮಣರ ವಿರೋಧದ ನಡುವೆಯೂ ಅಸ್ಪೃಶ್ಯ, ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟು ದಲಿತ ಸಮಾಜಕ್ಕೆ ತಾಯಿಯಂತೆ ಸಲುಹಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಂಬೂದ್ವೀಪ ರಾಮಣ್ಣ ಅನಕ್ಷಸ್ಥ ಸಾವಿತ್ರಿ ಬಾಪುಲೆ, ಅಕ್ಷರಸ್ಥೆಯಾಗಿ ದೇಶದ ಪ್ರಥಮ ಶಿಕ್ಷಕಿಯಾಗಿ ದೇಶಕ್ಕೆ ಮಾದರಿಯಾದರು. ಸದಾ ಪುಸ್ತಕಗಳನ್ನು ಓದುವಂತೆ. ಕಷ್ಟಕಾಲದಲ್ಲೂ ಕೈಬಿಡದೆ ಓದಿದರೆ ಉತ್ತಮ ಜೀವನ ಕಟ್ಟಿಕೊಳ್ಳಬಹುದೆಂದರು. ಕಾರ್ಯಕ್ರಮದಲ್ಲಿ ಸಾವಿತ್ರಿಬಾ ಪುಲೆ ಸರ್ಕಲ್ ಸ್ಥಾಪಿಸಿದ ಚಕ್ರವರ್ತಿ, ಶ್ರೀನಿವಾಸರಾಜು, ವಿಶ್ವಾನಂದ(ವಿಕೆವಿ), ಶಿಕ್ಷಕ ಸಿದ್ದೇಶ್.ಕೆ. ಪ್ರಾಧ್ಯಾಪಕರಾದ ಮಂಜುನಾಥ ಆರ್, ಕುಮಾರ್ ಹೆಚ್, ಶಿಕ್ಷಕ ಯಾದಲಗಟ್ಟೆ ಪ್ರಕಾಶ್, ವಾರ್ಡನ್ ರುದ್ರಮುನಿ, ಸಮಯ ಏಳಂಜಿ ಮುಂತಾದವರು ಪಾಲ್ಗೊಂಡಿದ್ದರು.

 

Share This Article
error: Content is protected !!
";