ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಕೋಲಾರ:
ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಜಿಲ್ಲೆಯ ನರಸಪುರ ಹೋಬಳಿ ಗರುಡನಪಾಳ್ಯದಲ್ಲಿ
21 ಎಕರೆ ಜಮೀನು ಕಬಳಿಕೆ ಆರೋಪ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ‌ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಲೋಕಾಯುಕ್ತ ಕಚೇರಿಗೆ ಕಂಪ್ಲೇಂಟ್​ ನೀಡಲಾಗಿದೆ. ತಮ್ಮ ಹುಟ್ಟೂರು ಕೋಲಾರ ತಾಲೂಕಿನ ಗರುಡಪಾಳ್ಯದಲ್ಲಿಯೇ ಸಚಿವರು ಸರ್ಕಾರಿ ಖರಾಬು ಜಮೀನು ಕಬಳಿಕೆ ಮಾಡಿದ್ದಾರೆ.

- Advertisement - 

ರಿ ಸರ್ವೆ ನಂಬರ್ 46, 47ರಲ್ಲಿ 21 ಎಕರೆ ಭೂಮಿನನ್ನು ನಕಲಿ ದಾಖಲೆ ಸೃಷ್ಟಿಸಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದ್ದು ನಿಷ್ಪಕ್ಷಪಾತ ತನಿಖೆಗೆ ಬಿಜೆಪಿ ಆಗ್ರಹಿಸಿದೆ.

ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿ ಸಚಿವರ ವಿರುದ್ಧ 2025ರ ಡಿಸೆಂಬರ್ 17ರಂದು ಬಿಜೆಪಿ ಮುಖಂಡ ತಮ್ಮೇಶ ಗೌಡ ಅವರು ಗಂಭೀರ ಆರೋಪ ಮಾಡಿದ್ದರು.

- Advertisement - 

ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬು ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎನ್ನುವವರೇ ಜಮೀನು ಕಬಳಿಸಿದ್ದಾರೆ. ಮೂಲ ದಾಖಲೆಗಳನ್ನು ಫೋರ್ಜರಿ ಮಾಡಲಾಗಿದೆ.

ಹೀಗಾಗಿ ಕೃಷ್ಣಭೈರೇಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.
ಸಚಿವ ಕೃಷ್ಣಭೈರೇಗೌಡರು ತಮ್ಮ ಮೇಲೆನ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ
, ಬಿಜೆಪಿ ಆರೋಪ ಅಲ್ಲಗಳೆದಿದ್ದರು. ಅದು ನಮ್ಮ ತಾತನವರ ಜಾಗ, ಅವರಿಗೆ ಮೂರು ಜನ ಮಕ್ಕಳು.

ಎಲ್ಲರಿಗೂ ಭಾಗ ಆಗಿ ನಮಗೆ ಬಂದಿದೆ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ಆಗಲಿ, ನಾನೇ ತನಿಖೆಗೆ ಸಹಕಾರ ಮಾಡುತ್ತೇನೆ ಎಂದಿದ್ದರು. ರಾಜಕೀಯ ಕೆಸರೆರಚಾಟಕ್ಕೆ ಅವರು ಆರೋಪ ಮಾಡಿದ್ದಾರೆ. ರಾಜಕೀಯದಲ್ಲಿ ಘನತೆ ಗೌರವದಿಂದ ಇದ್ದೇವೆ. ಆರೋಪ ಮಾಡಿರುವವರು ಘನತೆ ಗೌರವಕ್ಕೆ ಕೆಳಗೆ ಹೋಗ್ತೀವಿ ಅಂದ್ರೆ ನಾವೇನು ಮಾಡೋಣ ಎಂದು ಬಿಜೆಪಿಗರಿಗೆ ಸಚಿವರು ಕೌಂಟರ್​​ ಕೊಟ್ಟಿದ್ದನ್ನು ಸ್ಮರಿಸಬಹುದಾಗಿದೆ.

 

 

 

Share This Article
error: Content is protected !!
";