ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟು ನಾಲ್ಕು ಮಂದಿ ಕಾರ್ಮಿಕರು ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಸಮೀಪ ಸಂಭವಿಸಿದೆ.
ಚಾಲಕನ ನಿಯಂತ್ರಣ ತಪ್ಪಿ ಬುಲೆರೋ ಪಲ್ಟಿ- 4 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 5 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಬಳಿ ದುರ್ಘಟನೆ ಸಂಭವಿಸಿದೆ. ಅಡಿಕೆ ಖೇಣಿ ಮುಗಿಸಿ ವಾಪಸ್ ಬರುವಾಗ ಬುಲೆರೋ ಪಲ್ಟಿಯಾಗಿದ್ದು ಘಟನೆಯಲ್ಲಿ ಗಿರಿರಾಜ್, ಕಿರಣ್, ಅರುಣ್, ಹನುಮಂತಪ್ಪ ಇವರುಗಳು ದುರ್ಮರಣ ಹೊಂದಿದ್ದಾರೆ.
ಮೃತರೆಲ್ಲರು ಕಲ್ಲವ್ವನಾಗತಿ ಹಳ್ಳಿ ಮೂಲದವರು ಎನ್ನಲಾಗಿದೆ. ಮಾಯಕೊಂಡ ಬಳಿ ಅಡಿಕೆ ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಬುಲೆರೋ ವಾಹನ ಚಾಲಕನ ಅತಿವೇಗ & ಅಜಾಗರೂಕತೆಯಿಂದ ಘಟನೆ ಜರುಗಿದೆ ಎನ್ನಲಾಗಿದೆ.
ಘಟನೆಯಲ್ಲಿ ಐದು ಮಂದಿ ಗಂಭೀರ ಗಾಯ, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಚಿಕ್ಕಜಾಜೂರು ಪೊಲೀಸರು ಭೇಟಿ, ಪರಿಶೀಲನೆ ಮಾಡಿದ್ದಾರೆ.

