ಕಣ್ಣಿನ ರಕ್ಷಣೆ – ನಮ್ಮ ಹೊಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲೂಕಿನ ಯಲ್ಲದಕೆರೆ ಗ್ರಾಮದ ಶ್ರೀ ಜ್ಞಾನ ಜ್ಯೋತಿ ಪ್ರೌಢ ಶಾಲೆಯಲ್ಲಿ ಮಂಗಳವಾರದಂದು ಭಾರತೀಯ ರೆಡ್ ಕ್ರಾಸ್ ಹಾಗೂ ರೋಟರಿ ಸಂಸ್ಥೆ, ಸರ್ವೋದಯ ಬ್ರಹ್ಮ ಜ್ಞಾನ ಸಮಾಜ ಹಾಗೂ ಬಸವೇಶ್ವರ ಮೆಡಿಕಲ್ ಕಾಲೇಜು ಇವರುಗಳ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರವನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಅಧ್ಯಕ್ಷ ಹೆಚ್.ಎಸ್ ಸುಂದರಾಜ್ ಉದ್ಘಾಟಿಸಿದರು. ಕಣ್ಣಿನ ರಕ್ಷಣೆಯ ಕುರಿತು ಶಶಿಕಲಾ ರವಿಶಂಕರ್ ಮಾತನಾಡಿದರು.

- Advertisement - 

 ಶ್ರೀ ಜ್ಞಾನ ಜ್ಯೋತಿ ಪ್ರೌಢ ಶಾಲೆಯ ಮುಖ್ಯಸ್ಥ ಬಿ. ಜಿ ಮನೋಹರ್ ರವರು  ಶಿಬಿರದ ಸೌಲಭ್ಯವನ್ನು ಗ್ರಾಮೀಣ ಜನರು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಈ ಶಿಬಿರದಲ್ಲಿ ಸುಮಾರು ನೂರು ಜನ ನಾಗರಿಕರು ತಪಾಸಣೆ ಗೆ ಒಳಗಾಗಿ. ಐವತ್ತು ಜನರು ಉಚಿತ ಶಸ್ರ ಚಿಕಿತ್ಸೆಗೆ ಆಯ್ಕೆಯಾದರು. ಆಯ್ಕೆಯಾದವರಿಗೆ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಉಚಿತ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುವುದು ಎಂದು ನೇತ್ರ ತಜ್ಞ ಡಾ ಜಾವೇದ್ ತಿಳಿಸಿದರು.

- Advertisement - 

ಈ ಕಾರ್ಯಕ್ರಮದಲ್ಲಿ  ದಾನಿಗಳಾದ ಸಣ್ಣ ಭೀಮಣ್ಣ, ನಾರಾಯಣಚಾರ್ ಹಾಗೂ ಶಾಲಾ ಶಿಕ್ಷಕರು ಭಾಗವಹಿಸಿದ್ದರು.

 

Share This Article
error: Content is protected !!
";