ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರಪೊಲೀಸ್ ಠಾಣೆ, ಡಿ ವೈ. ಎಸ್ ಪಿ ಕಚೇರಿ ಮುಂಭಾಗ ನೇಕಾರ ಮಳಿಗೆ ಕಾಮಗಾರಿ ಶಂಕುಸ್ಥಾಪನೆ ಸಮಯದಲ್ಲಿ ಶಾಸಕ ಧೀರಜ್ ಮುನಿರಾಜ್ ಶಿಷ್ಟಾಚಾರ ಪಾಲನೆ ಮಾಡಿಲ್ಲವೆಂದು ಆರೋಪಿಸಿ ಶಾಸಕ ದೀರಜ್ ಮುನಿರಾಜು ವಿರುದ್ಧ ಕಾಂಗ್ರೆಸ್ ನಾಯಕರು ಮಾಜಿ ಶಾಸಕ ಟಿ. ವೆಂಕಟರಮಣಯ್ಯ ನೇತೃತ್ವದಲ್ಲಿ ಪ್ರವಾಸಿ ಮಂದಿರ ವೃತ್ತದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಪೋಲಿಸರು ಹಾಗೂ ಹೋರಾಟಗಾರರು ಮಧ್ಯೆ ಮಾತಿನಚಕಮಕಿ ಈ ಸಮಯದಲ್ಲಿ ಹೋರಾಟಗಾರರು ಹಾಗೂ ಪೋಲಿಸರು ಕೆಲ ಕಾಲ ತಳ್ಳಾಟ ನೂಕಾಟ ನಡೆಯಿತು.
ನಂತರ ಕೆಲ ಕಾಲ ಟಿ ಬಿ ವೃತ್ತದಲ್ಲಿ ಶಾಸಕ ಧೀರಜ್ ಮುನಿರಾಜು ವಿರುದ್ಧ ಘೋಷಣೆ ಕೂಗುವ ಮೂಲಕ ರಸ್ತೆ ತಡೆ ಮೂಲಕ ಧರಣಿ ನಡೆಸಿದರು.
ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ನೇಕಾರರ ಮಳಿಗೆ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಶಾಸಕ ಧೀರಜ್ ಮುನಿರಾಜ್ ನೆರವೇರಿಸಲು ಮುಂದಾಗಿದ್ದಾರೆ.
ಆದರೆ ಈ ವಿಚಾರದಲ್ಲಿ ಶಾಸಕ ಶೀಷ್ಠಾಚಾರ ಪಾಲನೆ ಮಾಡದೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲಿ ಶಾಸಕರು ಸ್ಥಳೀಯ ಜನಪ್ರತಿನಿದಿಗಳನ್ನು ಕಡೆಗಣಿಸಿದ್ದಾರೆ. ಸರ್ಕಾರದ ಅನುದಾನದಲ್ಲಿ ಕಾಮಗಾರಿ ಶಂಕು ಸ್ಥಾಪನೆ ಸಂದರ್ಭದಲ್ಲಿ ಬಿಜೆಪಿ ಪಕ್ಷದವರನ್ನು ಮಾತ್ರ ಆಹ್ವಾನಿಸಿ ಬೇರೆ ಪಕ್ಷದ ಜನಪ್ರತಿನಿದಿಗಳನ್ನು ಆಹ್ವಾನಿಸುವ ಕನಿಷ್ಠ ಸೌಜನ್ಯವನ್ನು ಶಾಸಕರು ತೋರುತ್ತಿಲ್ಲ. ನಾನು ಎರಡು ಬಾರಿ ಶಾಸಕನಾಗಿದ್ದಾಗ ಯಾವುದೇ ಕಾಮಗಾರಿ ಶಂಕುಸ್ಥಾಪನೆ ಸಮಯದಲ್ಲಿ ಪಕ್ಷತೀತವಾಗಿ ಎಲ್ಲರನ್ನು ಆಹ್ವಾನಿಸುತ್ತಿದ್ದೆ. ಆದರೆ ಶಾಸಕರು ಬಿಜೆಪಿ ಪಕ್ಷದಕಾರ್ಯಕ್ರಮ ಎಂಬಂತೆ ನಡೆದುಕೊಳ್ಳುತ್ತಿರುವುದು ಕಂಡನಿಯ ಎಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಅವರು ಮಾತನಾಡಿ ಶಿಷ್ಟಾಚಾರ ಪಾಲನೆ ಮಾಡದೇ ಕಾಂಗ್ರೆಸ್ ಜನಪ್ರತಿನಿದಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡು ಕನಿಷ್ಟ ಸೌಜನ್ಯ ಸಹ ಶಾಸಕ ಧೀರಜ್ ಮುನಿರಾಜು ಮಾಡುತ್ತಿಲ್ಲ. ಇದು ಸರ್ಕಾರಿ ಅನುದಾನದ ಕಾಮಗಾರಿ ಬಿಜೆಪಿ ಪಕ್ಷದ ಕಾರ್ಯಕ್ರಮವಲ್ಲವೆಂದು ಅವರು ಅರಿಯ ಬೇಕಿದೆ.
ಈ ವಿಚಾರವಾಗಿ ಶಾಂತಿಯುತ ಹೋರಾಟಕ್ಕೂ ಸಹ ಪೋಲಿಸರು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ಅಂತಿಮವಾಗಿ ಅಪರ ಪೋಲಿಸ್ ವರಿಷ್ಠಾಧಿಕಾರಿ ನಾಗರಾಜ್ ಹಾಗೂ ಡಿವೈಎಸ್ಪಿ ಪಾಂಡುರಂಗ ಎಸ್.ರವರ ನೇತೃತ್ವದಲ್ಲಿ ಮಾತುಕತೆ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

